ಕಾಬೂಲ್: ಅಫ್ಘಾನಿಸ್ತಾನವನ್ನು ತಾಲಿಬಾನ್ ಬಂಡುಕೋರರು ವಶಪಡಿಸಿದ ಹಿನ್ನೆಲೆಯಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆ ಸಿಐಎ ನಿರ್ದೇಶಕರು ತಾಲಿಬಾನ್ ಉನ್ನತ ರಾಜಕೀಯ ನಾಯಕರನ್ನು ಭೇಟಿಯಾಗಿದ್ದಾರೆಂದು ಅಮೆರಿಕ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ ಮಹಿಳೆಯರ ಮೇಲಿನ ನಿರ್ಬಂಧಗಳ ಬಗ್ಗೆ ವರದಿ ಹಿನ್ನೆಲೆಯಲ್ಲಿ ವಿಲಿಯಂ ಬರ್ನ್ಸ್ ಅವರು ಸೋಮವಾರ ತಾಲಿಬಾನ್ ಉನ್ನತ ನಾಯಕರನ್ನು ಭೇಟಿಯಾಗಿದ್ದಾರೆ. ಅಮೆರಿಕ ಪಡೆಗಳನ್ನು ಹಿಂದೆಗೆದುಕೊಳ್ಳುವ ಒಂದು ವಾರದ ಮೊದಲು ಅವರ ಈ ಭೇಟಿ ಮಹತ್ವ ಪಡೆದಿದೆ.
ಬರ್ನ್ಸ್ ಅವರು ಕಾಬೂಲ್ ನಲ್ಲಿ ತಾಲಿಬಾನ್ ನಾಯಕ ಅಬ್ದುಲ್ ಘನಿ ಬರದಾರ್ ಅವರು ಅಫ್ಘಾನಿಸ್ತಾನದ ಭದ್ರತೆಯನ್ನು ಪುನರ್ ಸ್ಥಾಪಿಸುವುದರ ಜೊತೆಗೆ ಅನೇಕ ಮಹತ್ವದ ವಿಷಯಗಳ ಸುದೀರ್ಘವಾಗಿ ಚರ್ಚಿಸಿದ್ದರೆಂದು ಮೂಲಗಳು ಸ್ಪಷ್ಟಪಡಿಸಿವೆ.
ಈ ಭೇಟಿಗೂ ಮೊದಲು ಬರ್ನ್ಸ್ ಅವರು ಅಫ್ಘಾನ್ ನ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಏಳು ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿದ್ದರು.
ತಾಲಿಬಾನ್ 1990 ದಶಕದಲ್ಲಿ ಅಫ್ಘಾನಿಸ್ತಾನವನ್ನು ಆಳಿದಾಗ, ತಾಲಿಬಾನ್ ಬಂಡುಕೋರರು ಹೆಚ್ಚಾಗಿ ಮಹಿಳೆಯರನ್ನು ತಮ್ಮ ಮನೆಗಳಿಗೆ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ದೂರದರ್ಶನ, ಸಂಗೀತವನ್ನು ನಿಷೇಧಿಸಿತ್ತು. ಶಂಕಿತ ಕಳ್ಳರ ಕೈಗಳನ್ನು ಕತ್ತರಿಸಿ ಸಾರ್ವಜನಿಕ ಮರಣದಂಡನೆಯನ್ನು ನಡೆಸಿತ್ತು ಎಂದು ಪಾಶ್ಚಿಮಾತ್ಯ ಜಗತ್ತು ಪ್ರಚಾರಪಡಿಸಿತ್ತು.
ಪ್ರಸಕ್ತ ತಾಲಿಬಾನ್ ನಾಯಕರು ಮಹಿಳೆಯರು, ಹುಡುಗಿಯರು ಮತ್ತು ಜನಾಂಗೀಯ ಅಲ್ಪಸಂಖ್ಯಾತರ ಹಕ್ಕುಗಳನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಮತ್ತು ಪ್ರತಿಕಾರದಿಂದ ದೂರವಿರುತ್ತಾರೆ ಎಂದು ಪಾಶ್ಚಿಮಾತ್ಯ ನಾಯಕರು ಬಣ್ಣಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಐಎ ನಿರ್ದೆಶಕರಾದ ವಿಲಿಯಮ್ಸ್ ಬರ್ನ್ಸ್ ಅವರ ತಾಲಿಬಾನ್ ಉನ್ನತ ರಾಜಕೀಯ ನಾಯಕರ ಜೊತೆಗಿನ ಭೇಟಿ ಮಹತ್ವ ಪಡಿದಿದೆ.