ರಷ್ಯಾ – ಉಕ್ರೇನ್ ಸಂಘರ್ಷ: ರಷ್ಯಾದ ಗುಂಡಿನ ದಾಳಿಗೆ ಅಮೆರಿಕ ಪತ್ರಕರ್ತ ಬಲಿ

Prasthutha|

ಕೀವ್: ಉಕ್ರೇನ್ ರಾಜಧಾನಿ ಕೀವ್ ಸಮೀಪದ ಇರ್ಪಿನ್ ಎಂಬಲ್ಲಿ ರಷ್ಯಾ ಸೈನಿಕರ ಗುಂಡಿಗೆ ದಾಳಿಗೆ ಅಮೆರಿಕ ಪತ್ರಕರ್ತ ಬ್ರೆಂಟ್ ರೆನಾಡ್ ಅವರು ಬಲಿಯಾಗಿದ್ದಾರೆ. ಈ ವೇಳೆ ಇನ್ನೊಬ್ಬ ಪತ್ರಕರ್ತ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಕೀವ್ ಪೊಲೀಸ್ ಮುಖ್ಯಸ್ಥ ಆ್ಯಂಡ್ರಿಯ್ ನ್ಯೆಬಿತೋವ್ ಮಾಹಿತಿ ನೀಡಿದ್ದಾರೆ.

- Advertisement -

ಈ ಮಧ್ಯೆ ಗಾಯಗೊಂಡ ಪತ್ರಕರ್ತನ ಗುರುತು ಇನ್ನೂ ಪತ್ತೆಯಾಗಿಲ್ಲ. ಯುದ್ಧಪೀಡಿತ ಉಕ್ರೇನ್’ನಿಂದ ಅವರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ವೀಡಿಯೋ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಬ್ರೆಂಟ್ ಅವರು ಪ್ರತಿಭಾವಂತ ಛಾಯಾಗ್ರಾಹಕ ಮತ್ತು ಚಿತ್ರ ನಿರ್ಮಾಪಕರಾಗಿದ್ದರು. ಪತ್ರಿಕೋಧ್ಯಮಕ್ಕೆ ಅವರ ಕೊಡುಗೆ ಅನನ್ಯ. ಅವರ ಅಕಾಲಿಕ ಅಗಲುವಿಕೆ ಅಪಾರ ನೋವು ತಂದಿದೆ ಎಂದು ನ್ಯೂಯಾರ್ಕ್ ಟೈಮ್ಸ್ ತಿಳಿಸಿದೆ.

- Advertisement -

ಸದ್ಯ ಬ್ರೆಂಟ್ ಅವರು 2015 ರ ವೇಳೆ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರ ಉಕ್ರೇನ್ ಪ್ರಯಾಣ ಪತ್ರಿಕೆಯ ಕಾರ್ಯಕ್ಕಾಗಿ ಅಲ್ಲ ಎಂದು ನ್ಯೂಯಾರ್ಕ್ ಟೈಮ್ಸ್ ಸ್ಪಷ್ಟಪಡಿಸಿದೆ.

ನ್ಯೂಯಾರ್ಕ್ ಟೈಮ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಧರಿಸುತ್ತಿದ್ದ ಐಡಿಯನ್ನು ಬ್ರೆಂಟ್ ಧರಿಸಿದ್ದರಿಂದ ಪ್ರಾಥಮಿಕವಾಗಿ ಮಾಧ್ಯಮಗಳು ನ್ಯೂಯಾರ್ಕ್ ಟೈಮ್ಸ್’ನ ಪತ್ರಕರ್ತ ಎಂದೇ ಸುದ್ದಿಯನ್ನು ಬಿತ್ತರಿಸಿದ್ದವು.

Join Whatsapp
Exit mobile version