ದೋಹಾ: FIFA ವಿಶ್ವಕಪ್ ವರದಿ ಮಾಡಲು ತೆರಳಿದ್ದ US ಪತ್ರಕರ್ತರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಗ್ರಾಂಟ್ ವಾಲ್(48) ಲುಸೈಲ್ ಐಕಾನಿಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅರ್ಜೆಂಟೀನಾ ಮತ್ತು ನೆದರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯವನ್ನು ವರದಿ ಮಾಡುವಾಗ ಕುಸಿದುಬಿದ್ದು ಮೃತಪಟ್ಟ ಪತ್ರಕರ್ತ.
FIFA ವಿಶ್ವಕಪ್ ವರದಿ ಮಾಡುವಾಗ LGBTQ ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿದ್ದಕ್ಕಾಗಿ ಗ್ರಾಂಟ್ ವಾಲ್ ಕತಾರ್ನಲ್ಲಿ ಬಂಧನಕ್ಕೊಳಗಾಗಿದ್ದರು.
ನನ್ನ ಸಹೋದರ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆಂದು ನಾನು ನಂಬುವುದಿಲ್ಲ, ಅವನು ಕೊಲ್ಲಲ್ಪಟ್ಟಿದ್ದಾನೆ. ಆತನ ಸಾವಿಗೆ ಕತಾರ್ ಸರ್ಕಾರ ಕಾರಣ ಎಂದು ಗ್ರಾಂಟ್ ಅವರ ಸಹೋದರ ಎರಿಕ್ ಆರೋಪಿಸಿದ್ದಾರೆ.