ಅಮೆರಿಕ ಚುನಾವಣೆ | ಬೈಡನ್ ಬೆಂಬಲಿಗರಿಂದ ಖುಷಿಯ ನೃತ್ಯ | ಗನ್ ಹಿಡಿದು ಮತ ಎಣಿಕೆ ಕೇಂದ್ರ ಸುತ್ತುವರಿದ ಟ್ರಂಪ್ ಬೆಂಬಲಿಗರು

Prasthutha: November 7, 2020

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಅಂಚು ಸಮೀಪಿಸುತ್ತಿರುವ ನಡುವೆ, ಆ ಪಕ್ಷದ ಬೆಂಬಲಿಗರು ಫಿಲಡೆಲ್ಫಿಯಾ ಬೀದಿಗಳಲ್ಲಿ ನರ್ತಿಸಿ ಸಂಭ್ರಮಿಸಿದ್ದಾರೆ. ಇನ್ನೊಂದೆಡೆ, ಫಲಿತಾಂಶದಿಂದ ಹತಾಶಗೊಂಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬಂದೂಕು ಹಿಡಿದು ಬೀದಿಗಿಳಿದ ಘಟನೆ ನಡೆದಿದೆ.

ಟ್ರಂಪ್ ಬೆಂಬಲಿಗರು ಗನ್ ಗಳನ್ನು ಹಿಡಿದು ಫೀನಿಕ್ಸ್ ನಲ್ಲಿ ಮತ ಎಣಿಕೆ ನಿಲ್ಲಿಸುವಂತೆ ಬೆದರಿಕೆಯೊಡ್ಡಿದ್ದಾರೆ. ಡೆಟ್ರಾಯಿಟ್ ನಲ್ಲಿ ಟ್ರಂಪ್ ಬೆಂಬಲಿರು ದೊಡ್ಡ ಸಂಖ್ಯೆಯಲ್ಲಿ ಬಂದೂಕು ಹಿಡಿದು ಫೀನಿಕ್ಸ್ ನ ಮತ ಎಣಿಕೆ ಕೇಂದ್ರವನ್ನು ಸುತ್ತುವರೆದಿದ್ದರು. ಅಲ್ಲದೆ, ನಾವು ಗೆದ್ದಿದ್ದೇವೆ ಎಂದು ಘೋಷಣೆ ಕೂಗಿದರು.

ಚುನಾವಣಾ ಫಲಿತಾಂಶ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದರೆ, ಬೈಡನ್ ಬಹುತೇಕ ಗೆದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಆದರೆ, ಟ್ರಂಪ್ ಬೆಂಬಲಿಗರು ಇದನ್ನು ಒಪ್ಪುತ್ತಿಲ್ಲ. ಮತ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆಪಾದಿಸುತ್ತಿದ್ದಾರೆ.   

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ