ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷಗಳ ನಡುವಿನ ಹೋರಾಟ ಜಿದ್ದಾಜಿದ್ದಿಯಲ್ಲಿ ಮುಂದುವರಿದಿದೆ. ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಡುವಿನ ಪೈಪೋಟಿ ತೀರಾ ನಿಕಟ ಹಂತದಲ್ಲಿ ಮುಂದುವರಿದಿದೆ.
ಆರಂಭಿಕ ಮುನ್ನಡೆಯನ್ನು ಕಾಯ್ದುಕೊಂಡು ಬಂದಿರುವ ಡೊನಾಲ್ಡ್ ಟ್ರಂಪ್, ಇನ್ನೂ ಮುನ್ನಡೆಯಲ್ಲಿದ್ದಾರಾದರೂ, ಜೋ ಬೈಡನ್ ಅವರ ಪರ ಮತಗಳೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆ. ಈಗಾಗಲೇ ಟ್ರಂಪ್ 18 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದರೆ, ಬೈಡನ್ 17 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಈ ಫಲಿತಾಂಶವನ್ನು ನೋಡುತ್ತಿದ್ದರೆ, ಜೋ ಬೈಡನ್ ಅವರು ಅಂತಿಮ ಸುತ್ತಿನ ವೇಳೆಗೆ ಟ್ರಂಪ್ ಅವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ. ಆದರೆ, ಟ್ರಂಪ್ ಮುನ್ನಡೆ ಹೀಗೇ ಕಾಯ್ದುಕೊಂಡರೆ, ಬೈಡನ್ ಗೆಲುವು ತ್ರಾಸದಾಯಕವೆನಿಸಬಹುದು.
ಸ್ಪಷ್ಟ ಬಹುಮತಕ್ಕೆ 270 ಸ್ಥಾನಗಳ ಅಗತ್ಯವಿದೆ. ಇದೀಗ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಪಕ್ಷ 294 ಸ್ಥಾನಗಳನ್ನು ಮತ್ತು ಬೈಡನ್ ಪಕ್ಷ 222 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.