ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರನ್ನು ಭೇಟಿಯಾದ ಅಮೆರಿಕದ ಭಾರತೀಯ ಹಂಗಾಮಿ ರಾಯಭಾರಿ

Prasthutha|

ನವದೆಹಲಿ: ಅಮೆರಿಕದ ಹಂಗಾಮಿ ಭಾರತೀಯ ರಾಯಭಾರಿ ಅತುಲ್ ಕೇಶಪ್ ಅವರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಕೇಶಪ್ ಅವರು ಭಾರತದ ವೈವಿಧ್ಯತೆ, ಪ್ರಜಾಪ್ರಭುತ್ವ, ಬಹುಸಂಸ್ಕ್ರತಿ, ಸಂಪ್ರದಾಯವನ್ನು ಒಳಗೊಂಡಂತೆ ರಾಷ್ಟ್ರವನ್ನು ಬಲಪಡಿಸುವಿಕೆಯ ಕುರಿತು ಭಾಗವತ್ ರೊಂದಿಗೆ ಸಂವಾದ ನಡೆಸಿದರು. ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಕೇಶಪ್ ಅವರು ರಾಷ್ಟ್ರದ ಹಿತದೃಷ್ಟಿಯಿಂದ ಈ ಭೇಟಿ ಮಹತ್ವ ಪಡೆದಿದೆ ಎಂದು ತಿಳಿಸಿದ್ದಾರೆ.

- Advertisement -

ಅಮೆರಿಕದ ರಾಯಭಾರಿಯಾಗಿರುವ ಕೇಶಪ್ ಅವರ ಅಧಿಕಾರಾವಧಿ ಸದ್ಯದಲ್ಲೇ ಮುಗಿಯಲಿದ್ದು, ನಿವೃತ್ತಿಯ ಹಿನ್ನೆಲೆಯಲ್ಲಿ ಗಣ್ಯರೊಂದಿಗೆ ವಿದಾಯ ಸಭೆಗಳನ್ನು ನಡೆಸುತ್ತಿದ್ದಾರೆ. ಅಮೆರಿಕ ನೂತನ ಭಾರತೀಯ ರಾಯಭಾರಿಯಾಗಿ ಲಾಸ್ ಏಂಜಲೀಸ್ ಮೇಯರ್ ಎರಿಕ್ ಗಾರ್ಸೆಟ್ಟಿಯವರ ಹೆಸರನ್ನು ಅಧ್ಯಕ್ಷ ಜೋ ಬೈಡೆನ್ ಈಗಾಗಲೇ ಘೋಷಿಸಿದ್ದಾರೆ.

ಈ ಹಿಂದೆ ಅತುಲ್ ಕಶೇಪ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ಭೇಟಿ ಭಾರತ ಮತ್ತು ಅಮೆರಿಕದ ನಡುವೆ ಸ್ನೇಹ ಮತ್ತು ಸಹಕಾರದ ಸುದೀರ್ಘ ಇತಿಹಾಸವನ್ನು ಪ್ರತಿಬಿಂಬಿಸಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು.

- Advertisement -