Home ಜಾಲತಾಣದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ: ಸಿಟಿ ರವಿ

ಬೆಂಗಳೂರು: ನಕ್ಸಲ್ ಚಟುವಟಿಕೆ ಒಡಿಶಾ ಕಡೆ ಸೀಮಿತ ಆಗಿತ್ತು. ಈಗ ಕರ್ನಾಟಕದಲ್ಲಿ ಶುರು ಮಾಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಅರ್ಬನ್ ನಕ್ಸಲರು ಹೊರಗೆ ಬಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಸಿಟಿ ರವಿ, ಚಿಕ್ಕಮಗಳೂರು, ಉಡುಪಿ ಭಾಗದಲ್ಲಿ ನಕ್ಸಲರು ಇದ್ದರು. ಗುಳೆ ಹೋಗಿದ್ದ ನಕ್ಸಲರು, ಈಗ ಸಮೃದ್ಧಿ ಕಾಲ ಅಂತ ಬಂದಿರೋ ತರ ಇದೆ. ನಕ್ಸಲರು ಸಂವಿಧಾನ ವಿರೋಧಿಗಳು. ಈಗ ಅವರಿಗೆ ಹಾಲು ಕುಡಿದಂತಾಗಿದೆ. ಅವರಿಗೆ ಸಂವಿಧಾನದ ಮೇಲೆ ಅಲ್ಲ, ಗುಂಡಿನ ಮೇಲೆ ನಂಬಿಕೆ ಇದೆ ಎಂದು ವಾಗ್ದಾಳಿ ನಡೆಸಿದರು.

ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಹೆಡ್ಗೆವಾರ್ ಅವರು ಆರ್‌ಎಸ್‌ಎಸ್ ಸಂಸ್ಥಾಪಕರು. ಅವರ ಬಗ್ಗೆ ಪಠ್ಯ ಇದೆ. ಅವರನ್ನು ವಿರೋಧಿಸಿ, ಪಠ್ಯದಿಂದ ಹೇಗೆ ತೆಗೆಯುತ್ತಾರೆ ನೋಡೋಣ. ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದವರು. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರು ಆಗಿದ್ದರು. ಅನುಭವದ ಆಧಾರದ ಮೇಲೆ ಸಿದ್ದರಾಮಯ್ಯ ತೀರ್ಮಾನ ತೆಗೆದುಕೊಳ್ಳುತ್ತಾರೆ ಅಂದುಕೊಂಡಿದ್ದೇನೆ. ಯಾರದ್ದೋ ಮಾತು ಕೇಳಿದರೆ ಮತ್ತೆ ಮನೆಗೆ ಹೋಗುತ್ತಾರೆ ಎಂದು ಟಾಂಗ್ ನೀಡಿದರು.

Join Whatsapp
Exit mobile version