Home ಟಾಪ್ ಸುದ್ದಿಗಳು UPSC ನೇಮಕಾತಿ; ನಾಗರೀಕ ಸೇವಾ ಪರೀಕ್ಷೆಗೆ ಅಧಿಸೂಚನೆ

UPSC ನೇಮಕಾತಿ; ನಾಗರೀಕ ಸೇವಾ ಪರೀಕ್ಷೆಗೆ ಅಧಿಸೂಚನೆ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗದಿಂದ ದೇಶದ ಅತ್ಯುನ್ನತ ಪರೀಕ್ಷೆಯಾದ ನಾಗರಿಕ ಸೇವಾ ಪರೀಕ್ಷೆಗೆ ಅಧಿಸೂಚನ ಹೊರಡಿಸಲಾಗಿದೆ.

ಪ್ರಸಕ್ತ ಸಾಲಿನ ಅಂದರೆ 2025ನೇ ಸಾಲಿನ ‘ಗ್ರೂಪ್​ ಎ’ ನಾಗರಿಕ ಸೇವಾ ಪರೀಕ್ಷೆ ಮತ್ತು ಭಾರತೀಯ ಅರಣ್ಯ ಸೇವಾ ಪರೀಕ್ಷೆ (ಐಎಫ್‌ಎಸ್‌) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ ವಿವರ: ಒಟ್ಟು ಹುದ್ದೆಗಳು – 1129

ನಾಗರಿಕ ಸೇವಾ ಪರೀಕ್ಷೆ – 979

ಭಾರತೀಯ ಅರಣ್ಯ ಸೇವಾ ಪರೀಕ್ಷೆ – 150

ವಯೋಮಿತಿ : ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಸಮುದಾಯದ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ : ಪ್ರಿಲಿಮ್ಸ್,​ ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ.

ಈ ಹುದ್ದೆಗೆ ಅಭ್ಯರ್ಥಿಗಳು ಜನವರಿ 22ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಶುಲ್ಕ ಸಲ್ಲಿಕೆಗೆ ಕಡೆಯ ದಿನಾಂಕ ಫೆಬ್ರವರಿ 11 ಆಗಿದೆ. ಒಟಿಆರ್​ (ಒಂದು ಬಾರಿ ನೋಂದಣಿ) ತಿದ್ದುಪಡಿಗೆ ಕಡೆಯ ದಿನಾಂಕ ಫೆಬ್ರವರಿ 12 ರಿಂದ 18. ಈ ಹುದ್ದೆಗೆ ಮೇ 25ರಂದು ಪರೀಕ್ಷೆ ನಡೆಯಲಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಮತ್ತು ಅಧಿಸೂಚನೆಗೆ upsc.gov.in ಇಲ್ಲಿಗೆ ಭೇಟಿ ನೀಡಿ.

Join Whatsapp
Exit mobile version