Home ಕರಾವಳಿ ಉಪ್ಪಿನಂಗಡಿಯಲ್ಲಿ ಗುಂಪುಗಳ ನಡುವೆ ಜಗಳ: ವಿಹಿಂಪ ಕಾರ್ಯಕರ್ತನನ್ನು ವಶಕ್ಕೆ ಪಡೆದ ಮೂವರು ಪೊಲೀಸರ ವಿರುದ್ಧ...

ಉಪ್ಪಿನಂಗಡಿಯಲ್ಲಿ ಗುಂಪುಗಳ ನಡುವೆ ಜಗಳ: ವಿಹಿಂಪ ಕಾರ್ಯಕರ್ತನನ್ನು ವಶಕ್ಕೆ ಪಡೆದ ಮೂವರು ಪೊಲೀಸರ ವಿರುದ್ಧ FIR

ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನೋರ್ವನನ್ನು ಉಪ್ಪಿನಂಗಡಿ ಪೊಲೀಸರು ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ ಹಿಂಸಿಸಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿ, ಮೂವರು ಪೊಲೀಸರ ವಿರುದ್ಧ ಅದೇ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.


ಕಳೆದ ಕೆಲ ದಿನಗಳ ಹಿಂದೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ದೇವಾಲಯದ ಪರಿಸರದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಅಲ್ಲಿ ನಿಂತಿದ್ದ ಜಗದೀಶ್ ಎಂಬಾತನನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಉಪ್ಪಿನಂಗಡಿಯ ಪೊಲೀಸ್ ಸಿಬ್ಬಂದಿ ಶೇಖರ ಗೌಡ, ಸಂಗಯ್ಯ ಹಾಗೂ ಪ್ರತಾಪ್ ಎಂಬವರು ತನ್ನನ್ನು ಅಕ್ರಮವಾಗಿ ಕೂಡಿ ಹಾಕಿ ಹಿಂಸಿಸಿದ್ದಾರೆ ಎಂದು ಆಪಾದಿಸಿದ್ದರು.


ಈ ಪ್ರಕರಣದ ಬಗ್ಗೆ ವಿಶ್ವ ಹಿಂದೂ ಪರಿಷತ್ ಮುಖಂಡರು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರು ನೀಡಿದ್ದರು.
ಇದೀಗ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೂವರು ಪೊಲೀಸರ ವಿರುದ್ಧ ಎಫ್ ಐಆರ್ ದಾಖಲಾಗಿದ್ದು, ತನಿಖೆಯು ವಿಚಾರಣೆಯ ಹಂತದಲ್ಲಿದೆ. ಅಲ್ಲಿಯ ತನಕ ಈ ಮೂವರು ಪೊಲೀಸರನ್ನು ಎಸ್ಪಿ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Join Whatsapp
Exit mobile version