Home ಕರಾವಳಿ ಉಪ್ಪಿನಂಗಡಿ | ಟಯರ್ ಅಂಗಡಿಯಲ್ಲಿ ಸ್ಫೋಟ: ಓರ್ವ ಸಾವು

ಉಪ್ಪಿನಂಗಡಿ | ಟಯರ್ ಅಂಗಡಿಯಲ್ಲಿ ಸ್ಫೋಟ: ಓರ್ವ ಸಾವು

ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೇಸರ್ ಸ್ಫೋಟಗೊಂಡ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿಯ ಗಾಂಧಿಪಾರ್ಕ್ ಬಳಿ ನಡೆದಿದೆ.


ಅಲಂಕಾರು ನಿವಾಸಿ ರಾಜೇಶ್ ಪೂಜಾರಿ (42) ಮೃತಪಟ್ಟವರು.


ಪೂಜಾರಿ ಅವರು ಬೆಳಗ್ಗೆ 11 ಗಂಟೆ ಸುಮಾರಿಗೆ ಟಯರ್ ರಿಸೋಲ್ ಮಾಡಿ ಅದಕ್ಕೆ ಗಾಳಿ ತುಂಬಿಸುತ್ತಿದ್ದಾಗ ಏರ್ ಕಂಪ್ರೇಸರ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ. ತಕ್ಷಣ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಅಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Join Whatsapp
Exit mobile version