Home ಕರಾವಳಿ ಉಪ್ಪಿನಂಗಡಿ: ಬಾವಿಗೆ ಬಿದ್ದ ಹಿಂದೂ ವ್ಯಕ್ತಿಯ ಮೃತದೇಹವನ್ನು ಮೇಲೆತ್ತಿದ ಮುಸ್ಲಿಮ್ ಯುವಕರು

ಉಪ್ಪಿನಂಗಡಿ: ಬಾವಿಗೆ ಬಿದ್ದ ಹಿಂದೂ ವ್ಯಕ್ತಿಯ ಮೃತದೇಹವನ್ನು ಮೇಲೆತ್ತಿದ ಮುಸ್ಲಿಮ್ ಯುವಕರು

ಪೆರ್ನೆ: ಬಾವಿಗೆ ಬಿದ್ದ ಹಿಂದೂ ವ್ಯಕ್ತಿಯ ಮೃತ ಶರೀರವನ್ನು ಮುಸ್ಲಿಂ ಯುವಕರು ಮೇಲಕ್ಕೆ ಎತ್ತಿ ಕುಟುಂಬಕ್ಕೆ ಹಸ್ತಾಂತರಿಸಿದ ಘಟನೆ ಸೋಮವಾರ ಉಪ್ಪಿನಂಗಡಿಯ ಪೆರ್ನೆ ಶಾಲೆಯ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು 29 ವರ್ಷದ  ಶ್ರೀನಿವಾಸ್  ಎಂದು ಗುರುತಿಸಲಾಗಿದ್ದು, ಇವರು ಕೃಷಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು.


ಶ್ರೀನಿವಾಸ್ ಮೃತದೇಹನ್ನು ಅಬ್ದುಲ್ ರಹಿಮಾನ್ ಅಡೆಕ್ಕಲ್ ಮತ್ತು ಆಶಿಫ್ ಕೊಯಿಲ ಮೇಲಕ್ಕೆ ಎತ್ತಿ ಮಾನವೀಯತೆ ಮೆರೆದ ಯುವಕರಾಗಿದ್ದಾರೆ.


ಶ್ರೀನಿವಾಸ್ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು. ಈ ವಿಷಯ ತಿಳಿದ ಸ್ಥಳೀಯ ಯುವಕರು ತಾವೇ ಮೃತ ಶರೀರವನ್ನು ಮೇಲಕ್ಕೆ ತಂದು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.


ಯುವಕರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Join Whatsapp
Exit mobile version