ಉಪ್ಪಿನಂಗಡಿ: ಕೆ ಎಸ್ ಆರ್ ಟಿ ಸಿ ಬಸ್ ಹರಿದು ಮೃತಪಟ್ಟಿರುವ ತಾಯಿ ಮಗು ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ವಿಕೃತಿಯನ್ನು ಮೆರೆದ ಆರೋಪಿ ವಿರುದ್ಧ ಎಸ್ ಡಿಪಿಐ ಉಪ್ಪಿನಂಗಡಿ ವಲಯ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದೆ.
ಆನಂದ ಎಂಬಾತ ತಾಯಿ ಮತ್ತು ಮೃತಪಟ್ಟ ಸುದ್ದಿಗೆ “ಕೆ ಎಸ್ ಆರ್ ಟಿಸಿ ಜಯವಾಗಲಿ” ಎಂದು ವಿಕೃತವಾಗಿ ಕಮೆಂಟ್ ಮಾಡಿದ್ದು, ಈತ ಸ್ವತಃ ಡ್ರೈವರ್ ಆಗಿದ್ದಾನೆ . ಅಮಾಯಕ ಜೀವಗಳೆರಡು ಬಲಿಯಾಗಿರುವ ಬಗ್ಗೆ ಈತನ ಕಮೆಂಟ್ ನೋಡಿ ಸಾರ್ವಜನಿಕರು ವ್ಯಾಪಕವಾಗಿ ಟೀಕಿಸಿದ್ದಾರೆ .
ಈ ಬಗ್ಗೆ ಇಕ್ಬಾಲ್ ಕೆಂಪಿ ನೇತೃತ್ವದಲ್ಲಿ ಪ್ರಕರಣ ದಾಖಲಿಸಿದ್ದಾರೆ.