ಸಿದ್ದೀಕ್ ವಿರುದ್ಧದ ಚಾರ್ಜ್ ಶೀಟ್ ದೇಶದ್ರೋಹ ಕಾನೂನಿನ ದುರುಪಯೋಗ ತಡೆಯುವ ಸುಪ್ರೀಮ್ ಕೋರ್ಟ್ ಪ್ರಯತ್ನಕ್ಕೆ ವಿರುದ್ಧ: ನ್ಯಾ.ಕೋಲ್ಸೆ ಪಾಟೀಲ್

Prasthutha|

ಲಕ್ನೋ: ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಯುಎಪಿಎ ಕಾಯ್ದೆಯಡಿಯಲ್ಲಿ ಬಂಧಿತ ಸಿದ್ದೀಕ್ ಕಾಪ್ಪನ್ ವಿರುದ್ಧ ಉತ್ತರ ಪ್ರದೇಶ ಎಸ್.ಟಿ.ಎಫ್ ಸಲ್ಲಿಸಿದ ಚಾರ್ಜ್ ಶೀಟ್ ದೇಶದ್ರೋಹ ಕಾನೂನಿನ ದುರುಪಯೋಗ ತಡೆಯಲು ಸುಪ್ರೀಮ್ ಕೋರ್ಟ್ ನಡೆಸುತ್ತಿರುವ ಪ್ರಯತ್ನಕ್ಕೆ ವಿರುದ್ಧ ಎಂದು MURL ಅಧ್ಯಕ್ಷ ನ್ಯಾಯಮೂರ್ತಿ ಬಿಜಿ ಕೋಲ್ಸೆ ಪಾಟೀಲ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

- Advertisement -

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಿದ್ದ ಎಂಬ ಹಿನ್ನೆಲೆಯಲ್ಲಿ ಕಾಪ್ಪನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾಪ್ಪನ್ ವಿರುದ್ಧದ ಚಾರ್ಜ್ ಶೀಟ್ ಅತ್ಯಂತ ಗೊಂದಲದ ದಾಖಲೆಯಾಗಿದ್ದು, ಇದು ದೇಶದ್ರೋಹದ ಕಾನೂನನ್ನು ಜಾರಿಗೆ ತರಲು ಮತ್ತು ದುರುಪಯೋಗವನ್ನು ತಡೆಯುವ ಸುಪ್ರೀಮ್ ಕೋರ್ಟ್ ನ ಪ್ರಯತ್ನಗಳಿಗೆ ವಿರುದ್ಧವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

Join Whatsapp