Home ಟಾಪ್ ಸುದ್ದಿಗಳು ಮಹಾತ್ಮ ಗಾಂಧಿ – ನಟಿ ರಾಖಿ ಸಾವಂತ್ ಅಲ್ಪ ವಸ್ತ್ರಧಾರಿಗಳು: ಸಮಜಾಯಿಸಿ ಗೆ ಮುಂದಾದ ಉ.ಪ್ರ...

ಮಹಾತ್ಮ ಗಾಂಧಿ – ನಟಿ ರಾಖಿ ಸಾವಂತ್ ಅಲ್ಪ ವಸ್ತ್ರಧಾರಿಗಳು: ಸಮಜಾಯಿಸಿ ಗೆ ಮುಂದಾದ ಉ.ಪ್ರ ಸ್ಪೀಕರ್

ಆಗ್ರಾ: ಮಹಾತ್ಮ ಗಾಂಧಿಯನ್ನು ಬಾಲಿವುಡ್ ನಟಿ ರಾಖಿ ಸಾವಂತ್ ಗೆ ಹೋಲಿಕೆ ಮಾಡಿ ಹೇಳಿಕೆ ನೀಡಿರುವ ಉ.ಪ್ರ ಸ್ಪೀಕರ್ ಹೃದಯ ನಾರಾಯಣ್ ದೀಕ್ಷಿತ್ ಸಮಜಾಯಿಸಿ ನೀಡಿದ್ದು, ಮಾಧ್ಯಮಗಳು ತನ್ನ ಹೇಳಿಕೆಯನ್ನು ತಿರುಚಿ ಪ್ರಕಟಿಸಿವೆ ಎಂದು ಆರೋಪಿಸಿದ್ದಾರೆ.

ಉನ್ನಾವೊ ಭಗವಂತಪುರ ಶಾಸಕರಾಗಿರುವ ಹೃದಯ ನಾರಾಯಣ್ ದೀಕ್ಷಿತ್ ಅವರು, ಬಿಜೆಪಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ “ಗಾಂಧೀಜಿ ಅಲ್ಪ ಬಟ್ಟೆ ತೊಡುತ್ತಿದ್ದರು, ಒಬ್ಬ ವ್ಯಕ್ತಿ ತನ್ನ ವಸ್ತ್ರಧಾರಣೆಯಿಂದ ಧೀಮಂತನಾಗುವುದಾದರೆ ನಟಿ ರಾಖಿ ಸಾವಂತ್ ಅಗ್ರಸ್ಥಾನಕ್ಕೇರುತ್ತಿದ್ದರು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ವಿವಾದಾತ್ಮಕ ಹೇಳಿಕೆಯ ಹಿನ್ನೆಲೆಯಲ್ಲಿ ಅವರು ಸಾರ್ವಜನಿಕವಾಗಿ ವ್ಯಾಪಕ ಟೀಕೆಗೊಳಗಾಗಿದ್ದರು. ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿದ ಸ್ಪೀಕರ್, ಅಲ್ಪ ವಸ್ತ್ರಧಾರಿಯಾದ ಗಾಂಧಿಯನ್ನು ರಾಷ್ಟ್ರವು ಬಾಪುವಾಗಿ ಕಾಣುತ್ತಿದೆ ಹೊರತು ರಾಖಿ ಸಾವಂತ್ ಅವರ ದೃಷ್ಟಿಕೋನದಲ್ಲಿ ಕಾಣುತ್ತಿಲ್ಲ ಎಂಬ ತನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಆರೋಪಿಸಿದ್ದಾರೆ.

Join Whatsapp
Exit mobile version