‘ಆಮ್ಲಜನಕ ಕೊರತೆ ‘ ನೋಟಿಸ್ ಹಾಕಿದ ಲಕ್ನೋ ಆಸ್ಪತ್ರೆಯ ವಿರುದ್ಧ ಯುಪಿ ಪೊಲೀಸರಿಂದ FIR ದಾಖಲು

Prasthutha|

ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆ ಇದೆ ಎಂದು ನೋಟಿಸ್ ಬಿಡುಗಡೆ ಮಾಡಿದ ನಂತರ ಉತ್ತರ ಪ್ರದೇಶ ಪೊಲೀಸರು ಲಕ್ನೋ ಆಸ್ಪತ್ರೆಯ ನಿರ್ದೇಶಕರು ಮತ್ತು ಇತರರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.

- Advertisement -

ಸನ್ ಆಸ್ಪತ್ರೆಯ ನಿರ್ದೇಶಕ ಅಖಿಲೇಶ್ ಪಾಂಡೆ ಅವರು ಮೇ ೫ ರಂದು ಬಿಡುಗಡೆ ಮಾಡಿದ ನೋಟಿಸ್ ನ್ನು ವದಂತಿಗಳನ್ನು ಹರಡುವ ಉದ್ದೇಶದಿಂದ ಪ್ರಕಟಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿಭೂತಿ ಖಂಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ ನಂತರ, ನಮಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಯಾಗಲಿಲ್ಲ. ಆದ್ದರಿಂದ ಆಮ್ಲಜನಕದ ಬೆಂಬಲದಲ್ಲಿರುವ ರೋಗಿಗಳ ಕುಟುಂಬ ಸದಸ್ಯರು ತಮ್ಮ ರೋಗಿಗಳನ್ನು ಹೆಚ್ಚಿನ ನಿರ್ವಹಣೆಗಾಗಿ ಉನ್ನತ ಕೇಂದ್ರಕ್ಕೆ ಕರೆದೊಯ್ಯುವಂತೆ ನಾವು ವಿನಂತಿಸುತ್ತೇವೆ. ಅನಾನುಕೂಲತೆಗಾಗಿ ನಾವು ತುಂಬಾ ವಿಷಾದಿಸುತ್ತೇವೆ” ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

- Advertisement -