ಮದರಸಗಳಲ್ಲಿ ಕಲಿತವರು ಉಗ್ರರಾಗಿ ಹೊರಬರುತ್ತಾರೆ : ಉ.ಪ್ರದೇಶ ಸಚಿವ ರಘುರಾಜ್ ಸಿಂಗ್ ವಿವಾದ

Prasthutha|

► ಅವಕಾಶ ಸಿಕ್ಕರೆ ಮದರಸ ಮುಚ್ಚಲು ಹಿಂದೇಟು ಹಾಕಲಾರೆವು

- Advertisement -

ಉತ್ತರ ಪ್ರದೇಶ: ಮದರಸಗಳು ಉಗ್ರರ ತಾಣವಾಗಿದೆ ಅಲ್ಲಿ ಕಲಿತವರು ಉಗ್ರರಾಗಿ ಹೊರಬರುತ್ತಾರೆ ಎಂದು ಉತ್ತರ ಪ್ರದೇಶದ ಕಾರ್ಮಿಕ ಸಚಿವ ರಘುರಾಜ್ ಸಿಂಗ್ ನಾಲಗೆ ಹರಿಯಬಿಟ್ಟಿದ್ದಾರೆ. ಮದರಸಗಳು ಉಗ್ರರನ್ನು ಸಿದ್ಧಪಡಿಸುತ್ತಿವೆ, ರಾಜ್ಯದಲ್ಲಿ ಮದರಸ ಮುಚ್ಚಲು ಅವಕಾಶ ಸಿಕ್ಕರೆ ಹಿಂದೇಟು ಹಾಕಲಾರೆವು ಎಂದು ಹೇಳಿದ್ದಾರೆ.

ನಮಗೇನಾದರೂ ಅವಕಾಶ ಸಿಕ್ಕರೆ ಮದರಸಗಳನ್ನು ಮುಚ್ಚಲು ಎಂದಿಗೂ ಹಿಂದೇಟು ಹಾಕಲಾರೆವು ಎಂದಿದ್ದಾರೆ. ರಾಜ್ಯದ ಮದರಸಗಳನ್ನು ನವೀಕರಣ ಹಾಗೂ ಆಧುನೀಕರಣಗೊಳಿಸುವ ಬಗ್ಗೆ ಸಿಎಂ ಆದಿತ್ಯನಾತ ಘೋಷಿಸಿದ ಬೆನ್ನಲ್ಲೇ ಸಚಿವರ ಈ ವಿವಾದಾತ್ಮಕ ಹೇಳಿಕೆ ಹೊರಬಿದ್ದಿದೆ.

- Advertisement -

ಈ ಮೊದಲು ನಮ್ಮ ರಾಜ್ಯದಲ್ಲಿ 250 ಮದರಸಗಳಿದ್ದವು, ಈಗ 22 ಸಾವಿರಕ್ಕೂ ಅಧಿಕ ಮದರಸಗಳನ್ನು ಸೃಷ್ಟಿಸಲಾಗಿದೆ ಎಂದರು. 2016ರಲ್ಲಿ ಭದ್ರತಾ ಪಡೆಯ ಗುಂಡಿಗೆ ಬಲಿಯಾದ ಹಿಜ್ಬುಲ್ ಮುಜಾಹಿದೀನ್ ನ ಕಮಾಂಡರ್ ಬುರ್ಹಾನ್ ವಾನಿಯೂ ಮದರಸಾದ ಸೃಷ್ಟಿ ಎಂದು ಹೇಳಿದ್ದಾರೆ. ಈ ಮಧ್ಯೆ ಸಚಿವರ ಭಯೋತ್ಪಾದನಾ ಮತ್ತು ಮದರಸ ಹೋಲಿಕೆಯ ಹೇಳಿಕೆಯು ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ ಪಿ ಮುಖಂಡರೋರ್ವ ಈ ವಿವಾದಾತ್ಮಾಕ ಹೇಳಿಕೆಯು ಬಿಜೆಪಿಯ ಮುಸ್ಲಿಂ ವಿರೋಧಿ ಮನಸ್ಥಿತಿಯನ್ನು ಬಿಂಬಿಸುತ್ತದೆ, ಇದು ಕೇವಲ ಒಬ್ಬ ರಘುರಾಜ್ ಸಿಂಗ್ ಮಾತಲ್ಲ ಹಲವು ಬಿಜೆಪಿಯ ಶಾಸಕರು ಇದೇ ಮನಸ್ಥಿತಿಯವರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp