Home ಟಾಪ್ ಸುದ್ದಿಗಳು UP: ರಾಜ್ಯಸಭಾ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ, 2 ಸ್ಥಾನಗಳಲ್ಲಿ ಎಸ್‌ಪಿ ಗೆಲುವು

UP: ರಾಜ್ಯಸಭಾ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ, 2 ಸ್ಥಾನಗಳಲ್ಲಿ ಎಸ್‌ಪಿ ಗೆಲುವು

ಉತ್ತರ ಪ್ರದೇಶ: ಉತ್ತರ ಪ್ರದೇಶದಲ್ಲಿ 10 ರಾಜ್ಯಸಭಾ ಸ್ಥಾನಗಳ ಪೈಕಿ ಎಂಟು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.ಉಳಿದ ಎರಡು ಸ್ಥಾನಗಳನ್ನು ಸಮಾಜವಾದಿ ಪಕ್ಷ ತನ್ನದಾಗಿಸಿಕೊಂಡಿದೆ .

ಚುನಾವಣೆಯಲ್ಲಿ ವಿರೋಧ ಪಕ್ಷದ ಅಭ್ಯರ್ಥಿಗಳು ಆಡಳಿತ ಪಕ್ಷಕ್ಕೆ ಅಡ್ಡ ಮತದಾನ ಮಾಡಿದ ಘಟನೆಯೂ ನಡೆದಿದೆ.

ಬಿಜೆಪಿಯ ಎಲ್ಲ 8 ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ನಾವು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ನಮ್ಮ 8 ಅಭ್ಯರ್ಥಿಗಳು ಇಂದು ಗೆದ್ದಿದ್ದಾರೆ. ಎಲ್ಲಾ ವಿಜೇತ ಅಭ್ಯರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ಯಾರ ಮತಗಳಿಂದ ಅವರು ಗೆದ್ದಿದ್ದಾರೆ ಎಂಬುದಕ್ಕೆ ನಾನು ಜನರಿಗೆ ಧನ್ಯವಾದ ಹೇಳುತ್ತೇನೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

Join Whatsapp
Exit mobile version