Home ಟಾಪ್ ಸುದ್ದಿಗಳು ಮೂರು ಗೋಣಿ ಚೀಲಗಳಲ್ಲಿ ತುರುಕಿ ಎಸೆಯಲ್ಪಟ್ಟಿದ್ದ ಹೆಣ್ಣು ಶಿಶು ಜೀವಂತವಾಗಿ ಪತ್ತೆ

ಮೂರು ಗೋಣಿ ಚೀಲಗಳಲ್ಲಿ ತುರುಕಿ ಎಸೆಯಲ್ಪಟ್ಟಿದ್ದ ಹೆಣ್ಣು ಶಿಶು ಜೀವಂತವಾಗಿ ಪತ್ತೆ

ಮೀರತ್ : ಹೆಣ್ಣು ಶಿಶುವೊಂದನ್ನು ಸಾಯಿಸುವ ಉದ್ದೇಶದಿಂದ ಅದರ ಹೆತ್ತವರು ಮೂರು ಗೋಣಿ ಚೀಲಗಳಲ್ಲಿ ಉಸಿರುಗಟ್ಟುವಂತೆ ತುರುಕಿ, ಕೊರೆವ ಚಳಿಯಲ್ಲಿ ಅದನ್ನು ಬಿಟ್ಟು ಹೋಗಿದ್ದರೂ, ಮಗು ಜೀವಂತವಾಗಿ ಉಳಿದಿರುವ ಘಟನೆ ಮೀರತ್ ನಲ್ಲಿ ವರದಿಯಾಗಿದೆ.

ಮಗುವಿನ ಅಳು ಕೇಳಿ ಸ್ಥಳೀಯರು ಧಾವಿಸಿ, ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಬಳಿಕ ಸ್ಥಳೀಯರು ಪೊಲೀಸರನ್ನು ಕರೆಸಿದ್ದು, ಅವರು ಸ್ಥಳೀಯ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಮಗು ಆರೋಗ್ಯವಾಗಿದೆ. ಚಿಕಿತ್ಸೆ ನೀಡಲಾಗುತ್ತದೆ ಎಂದು ಪೊಲಿಸರು ತಿಳಿಸಿದ್ದಾರೆ.   

Join Whatsapp
Exit mobile version