ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿಉಂಟಾದ ಅಕಾಲಿಕ ಮಳೆಯಿಂದಾಗಿ ಅಪಾರ ಹಾನಿಯುಂಟಾಗಿದ್ದು, ಕೆಲವು ಕಡೆಗಳಲ್ಲಿ ಸಾವುಗಳು ಸಂಭವಿಸಿವೆ.
ಶ್ರೀರಂಗಪಟ್ಟಣದಲ್ಲಿ ಚಲಿಸುತ್ತಿದ್ದ ಬೈಕ್ಗೆಲ ತೆಂಗಿನಮರ ಮುರಿದು ಬಿದ್ದು ಹೆತ್ತವರೊಂದಿಗೆ ಬೈಕಿನಲ್ಲಿ ಹೋಗುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಮಳೆ ಬಂದ ಕಾರಣ ಮರದಡಿಯಲ್ಲಿ ನಿಂತಿದ್ದ ಮೈಸೂರಿನ ಸಿದ್ದಲಿಂಗ ನಾಯಕ (70) ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಕೆ.ಆರ್.ನಗರ ಪೊಲೀಸರು ತಿಳಿಸಿದ್ದಾರೆ.
ಮನೆಯ ಹಿಂದೆ ಇದ್ದ ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಕಟ್ಟಲು ಹೋದ ಸಂದರ್ಭ ಸಿಡಿಲಿನ ಹೊಡೆತದಿಂದ ಹಾಸನದ 42 ವರ್ಷದ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಹಾಸನ ಪೊಲೀಸರು ಹೇಳಿದ್ದಾರೆ.