Home ಕರಾವಳಿ ಅನೈತಿಕ ಗೂಂಡಾಗಿರಿಯ ಹಿಂದೆ ನಳಿನ್ , ಭರತ್ ಶೆಟ್ಟಿ ಕೈವಾಡ – ಮುನೀರ್ ಕಾಟಿಪಳ್ಳ

ಅನೈತಿಕ ಗೂಂಡಾಗಿರಿಯ ಹಿಂದೆ ನಳಿನ್ , ಭರತ್ ಶೆಟ್ಟಿ ಕೈವಾಡ – ಮುನೀರ್ ಕಾಟಿಪಳ್ಳ

ದ.ಕ ಜಿಲ್ಲೆಯಲ್ಲಿ ಧರ್ಮ ದೇವರ ಹೆಸರಲ್ಲಿ ಬಿಜೆಪಿ ಸಂಘಪಾರಿವಾರ ದಿನ ನಿತ್ಯ ನಡೆಸುವ ಅನೈತಿಕ ಗೂಂಡಾಗಿರಿ ಇದು ಚುನಾವಣಾ ಮುನ್ನಲೆಯ ತಯಾರಿ ಈ ಅನೈತಿಕ ಗೂಂಡಾಗಿರಿಯ ಹಿಂದೆ ಸಂಸದ ನಳಿನ್ ಕಟೀಲ್, ಶಾಸಕ ಭರತ್ ಶೆಟ್ಟಿ ಕೈವಾಡವಿದೆ ಎಂದು ಡಿವೈಎಫ್ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ ಆರೋಪಿಸಿದರು. ಅವರು ಇಂದು ನಗರದ ಕ್ಲಾಕ್ ಟವರ್ ಬಳಿ ಡಿವೈಎಫ್ಐ ಮಂಗಳೂರು ನಗರ ಸಮಿತಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸಂಘಪರಿವಾರ ಅಮಾಯಕ ವಿದ್ಯಾರ್ಥಿ ಯುವಜನರ ಮೇಲೆ ಹಲ್ಲೆ ನಡೆಸುವ ಮೂಲಕ ಗೂಂಡಾಗಿರಿ ನಡೆಸಿ ಜಿಲ್ಲೆಯ ಕೋಮು ಸಾಮರಸ್ಯವನ್ನು ಹಾಳುಗೆಡಿಸಲು ಪ್ರಯತ್ನಿಸುತ್ತಿದೆ. ಜಿಲ್ಲೆಯ ಪೊಲೀಸ್ ಇಲಾಖೆ ಈ ರೀತಿ ಗೂಂಡಾಗಿರಿ ನಡೆಸುವವರ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಸಂಘಪರಿವಾರಕ್ಕೆ ಸಂಪೂರ್ಣ ಶರಣಾಗತಿಯಾದಂತೆ ವರ್ತಿಸುತ್ತಿದೆ. ಬಿಜೆಪಿ ಧರ್ಮ ದೇವರ ಹೆಸರಲ್ಲಿ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಗಮನವನ್ನು ತಮ್ಮನ್ನು ಕಾಡುವ ಮೂಲ ಸಮಸ್ಯೆಗಳಿಂದ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ. ಜಿಲ್ಲೆಯಲ್ಲಿ ಉದ್ಯೋಗದ ಪ್ರಶ್ನೆ, ಆರೋಗ್ಯದ ಪ್ರಶ್ನೆ , ಶಿಕ್ಷಣದ ಹೆಸರಲ್ಲಿ ನಡೆಸುವ ದಂಧೆಗಳ ವಿರುದ್ದ ಯಾವೊಂದು ವಿಚಾರಗಳನ್ನು ಬಿಜೆಪಿ‌ ಇತ್ಯರ್ಥ ಪಡಿಸಲು ಗಮನಹರಿಸುತ್ತಿಲ್ಲ ಕೇವಲ ಜನರನ್ನು ಪರಸ್ಪರ ಎತ್ತಿಕಟ್ಟಿ ಸಂಘರ್ಷಕ್ಕೆ , ಕೋಮುಹಿಂಸೆಗೆ ನಡೆಸಲು ಆ ಮೂಲಕ ಜನರ ಸಾವು ನೋವು ಸಂಭವಿಸುವ ಪ್ರಯತ್ನದಲ್ಲಿದೆ. ಇಂತಹ ಪ್ರಯತ್ನಗಳಿಗೆ ಜಿಲ್ಲೆಯ ಪ್ರಜ್ಞಾವಂತ ಜನ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದರು.

ಡಿವೈಎಫ್ಐ ಮಾಜಿ ರಾಜ್ಯದ್ಯಕ್ಷರಾದ ಸುನೀಲ್ ಕುಮಾರ್ ಬಜಾಲ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ , ಜೆಡಿಎಸ್ ಮಹಿಳಾ ಮುಖಂಡರಾದ ಸುಮತಿ‌ ಎಸ್ ಹೆಗ್ಡೆ, ಮನೋಜ್ ವಾಮಂಜೂರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಈ ವೇಳೆ ಡಿವೈಎಫ್ಐ ಉಳ್ಳಾಲ ವಲಯ ಸಮಿತಿ ಅಧ್ಯಕ್ಷರಾದ ರಫೀಕ್ ಹರೇಕಳ, ಕಾರ್ಯದರ್ಶಿ ಸುನಿಲ್‌ ತೇವುಲ , ಡಾ ಕೃಷ್ಣಪ್ಪ ಕೊಂಚಾಡಿ, ಜೇರಾಲ್ಡ್ ಟವರ್, ಯಾದವ ಶೆಟ್ಟಿ, ಯೋಗಿಶ್ ಜಪ್ಪಿನಮೊಗರು, ಅಲ್ತಾಫ್ ತುಂಬೆ, ಕೃಷ್ಣ ತಣ್ಣೀರುಬಾವಿ ಮುಂತಾದವರು ಉಪಸ್ಥಿತರಿದ್ದರು.

Join Whatsapp
Exit mobile version