Home ಟಾಪ್ ಸುದ್ದಿಗಳು ಸದನದಲ್ಲಿ ಅಶಿಸ್ತಿನ ವರ್ತನೆ : 7 ಬಿಜೆಪಿ ಶಾಸಕರ ಸಸ್ಪೆಂಡ್ ವಾಪಸ್

ಸದನದಲ್ಲಿ ಅಶಿಸ್ತಿನ ವರ್ತನೆ : 7 ಬಿಜೆಪಿ ಶಾಸಕರ ಸಸ್ಪೆಂಡ್ ವಾಪಸ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ಅಮಾನತುಗೊಂಡಿದ್ದ 7 ಬಿಜೆಪಿ ಶಾಸಕರ ಅಮಾನತನ್ನು ಇದೀಗ ವಾಪಸ್ ಪಡೆಯಲಾಗಿದೆ.

ಮಾರ್ಚ್ 9ರಂದು ಸುದೀಪ್ ಮುಖೋಪಾಧ್ಯಾಯ, ಮಿಹಿರ್ ಗೋಸ್ವಾಮಿ
ಸದನದಲ್ಲಿ‌ ಅಶಿಸ್ತಿನ ವರ್ತನೆಗೆಂದು ಅಮಾನತು ಮಾಡಲಾಗಿತ್ತು .ಅದೇ ರೀತಿ ಮಾರ್ಚ್ 28ರಂದು ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಮುಖ್ಯ ಸಚೇತಕ ಮನೋಜ್ ತಿಗ್ಗಾ ಸೇರಿದಂತೆ ನರಹರಿ ಮಹತೋ, ಮಿಹಿರ್ ಗೋಸ್ವಾಮಿ ಮತ್ತು ಶಂಕರ್ ಘೋಷ್ ಮುಂತಾದವರನ್ನು ಅಮಾನತುಗೊಳಿಸಲಾಗಿತ್ತು.

ಬಿಜೆಪಿ ಶಾಸಕರು ತಮ್ಮ ಅಮಾನತು ಹಿಂಪಡೆಯಲು ಸ್ಪೀಕರ್ ಬಿಮನ್ ಬಂಧೋಪಾಧ್ಯಾಯ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಾಂತ್ರಿಕ ದೋಷದ ಕಾರಣ ಉಲ್ಲೇಖಿಸಿ ಸ್ಪೀಕರ್ ಅವರು ಮನವಿಯನ್ನು ಮರುಸಲ್ಲಿಸುವಂತೆ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಶಾಸಕರು ವಿಧಾನಸಭೆಯ ಮುಂಭಾಗವೇ ಪ್ರತಿಭಟನೆ ನಡೆಸಿದ್ದರು. ಮಂಗಳವಾರ ಸುವೇಂದು ಅಧಿಕಾರಿ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಈ ವಿಷಯವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಸ್ಪೆಂಡ್ ಆದ ಬಿಜೆಪಿಯ 7 ಶಾಸಕರ ಅಮಾನತು ಇದೀಗ ಕೋರ್ಟ್ ವಾಪಾಸ್ ಪಡೆದಿದೆ.

Join Whatsapp
Exit mobile version