Home ಕರಾವಳಿ ಮಂಗಳೂರಿನಲ್ಲಿ ಲ್ಯಾಂಡ್ ಆಗದ ವಿಮಾನಗಳು: 500ಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ

ಮಂಗಳೂರಿನಲ್ಲಿ ಲ್ಯಾಂಡ್ ಆಗದ ವಿಮಾನಗಳು: 500ಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ

ಮಂಗಳೂರು: ತಡ ರಾತ್ರಿ ಸುರಿದ ಭಾರಿ ಮಳೆಯ ಪರಿಣಾಮ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೇರೆಡೆಯಿಂದ ಬಂದಿದ್ದ ವಿಮಾನಗಳು ಲ್ಯಾಂಡ್ ಆಗಲು ತೊಂದರೆಯಾಗಿದ್ದು, ಹೀಗಾಗಿ ವಿಮಾನವನ್ನು ಬೇರೆ ಏರ್ ಪೋರ್ಟ್ ಗೆ ಕಳುಹಿಸಲಾಗಿದೆ.


ಮಂಗಳೂರು ಏರ್ ಪೋರ್ಟ್ ನಲ್ಲಿ ರನ್ ವೇ ಅಸ್ಪಷ್ಟವಾಗಿ ಕಂಡು ಬಂದ ಕಾರಣ, ಕುವೈತ್ ನಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು ಸ್ವಲ್ಪ ಸಮಯ ಆಕಾಶದಲ್ಲಿಯೇ ಸುತ್ತಾಡಿ ಬಳಿಕ ಬೆಂಗಳೂರಿಗೆ ತೆರಳಿದೆ. ಚೆನ್ನೈ-ಮಂಗಳೂರು, ಹೈದರಾಬಾದ್-ಮಂಗಳೂರು ಹಾಗೂ ಮುಂಬೈ-ಮಂಗಳೂರು ವಿಮಾನಗಳು ಕೇರಳದ ಕೊಚ್ಚಿ ವಿಮಾನ ‌ನಿಲ್ದಾಣಕ್ಕೆ ಬಂದಿಳಿದಿವೆ.

ಮಂಗಳೂರಲ್ಲಿ ವಿಮಾನ ಲ್ಯಾಂಡಿಂಗ್ ಆಗದ ಕಾರಣ ಸುಮಾರು 500ಕ್ಕೂ ಅಧಿಕ ಪ್ರಯಾಣಿಕರಿಗೆ ತೊಂದರೆಯಾಗಿದೆ.

Join Whatsapp
Exit mobile version