ನ್ಯೂಯಾರ್ಕ್: ವಿಶ್ವವಿದ್ಯಾನಿಲಯದಲ್ಲಿ ಕುಸ್ತಿ ಅಭ್ಯಾಸ ಮಾಡುವಾಗ ಸರಿಯಾದ ಕ್ರಮ ಅನುಸರಿಸದೆ ಗ್ರಾಂಟ್ ಬ್ರೇಸ್ ಎಂಬ 20ರ ವಿದ್ಯಾರ್ಥಿಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಅಮೆರಿಕದ ಕೆಂಟುಕಿ ವಿಶ್ವವಿದ್ಯಾನಿಲಯವು ರೂ. 115 ಕೋಟಿ ಪರಿಹಾರ ನೀಡಿ ಪ್ರಕರಣಕ್ಕೆ ತೆರೆ ಎಳೆದಿದೆ.
2020ರಲ್ಲಿ ವಿದ್ಯಾರ್ಥಿ ಗ್ರಾಂಟ್, ವಿಶ್ವವಿದ್ಯಾನಿಲಯದಲ್ಲಿ ಕುಸ್ತಿ ಅಭ್ಯಾಸ ಮಾಡುತ್ತಿದ್ದರು. ಬಿಸಿಲಿಗೆ ನೀರು ಕೇಳಿದರೂ ಕೊಡದೆ ತರಬೇತಿ ನಡೆಸಲಾಗಿತ್ತು. ಗ್ರಾಂಟ್ ಬ್ರೇಸ್ ಕಡೆಗೂ ತರಬೇತಿ ಮುಗಿಸಿದರೂ ಈಚೆ ಬಂದವರು ಕುಸಿದು ಬಿದ್ದು ಸಾವಿಗೀಡಾದರು. ದಾಹ ಮತ್ತು ಬಿಸಿಲಾಘಾತ ಸಾವಿಗೆ ಕಾರಣ ಎಂದು ತಿಳಿದುದರಿಂದ ಮನೆಯವರು ಪ್ರಕರಣ ದಾಖಲಿಸಿದ್ದರು.
ಈಗ ಕೆಂಟುಕಿ ವಿಶ್ವವಿದ್ಯಾನಿಲಯವು ಇಬ್ಬರು ತರಬೇತುದಾರರನ್ನು ವಜಾಗೊಳಿಸಿದೆ. ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡಿ ಪ್ರಕರಣಕ್ಕೆ ಕೊನೆ ಹಾಡಿದೆ.