ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿದ್ದ ಪರೀಕ್ಷೆಗಳು ಆರಂಭವಾಗಿದ್ದು, ಮೊದಲ ದಿನದ ಪರೀಕ್ಷೆಗೆ 839 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು (ಆಗಸ್ಟ್ 2) 839 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು (ಬೆಳಗ್ಗೆ 456, ಮಧ್ಯಾಹ್ನ 383). ಪ್ರಥಮ ಬಿ.ಎ (36), ಬಿ.ಎಸ್ಸಿ (109), ಬಿ.ಕಾಂ (289), ತೃತೀಯ ಬಿಸಿಎ (12), ಅಂತಿಮ ಬಿ.ಎ (29), ಬಿ.ಎಸ್ಸಿ (127), ಬಿ. ಕಾಂ (224) ಮತ್ತು ಅಂತಿಮ ಬಿಬಿಎಂ (3) ವಿದ್ಯಾರ್ಥಿಗಳು ಪರೀಕ್ಷೆ ಬರೆದರು.
ಕೊರೋನಾ- 19 ದಿಂದ ಪೀಡಿತವಾಗಿರುವ ಕೇರಳದ 157 ಪದವಿ ವಿದ್ಯಾರ್ಥಿಗಳು ಮತ್ತು 36 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದಾರೆ. ಪದವಿಯಲ್ಲಿ ಬಿ.ಎ ಯ 52, ಬಿ.ಕಾಂ ನ 52 ಮತ್ತು ಬಿ.ಎಸ್ಸಿಯ 53 ವಿದ್ಯಾರ್ಥಿಗಳಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ ಕೇರಳದ 19 ಎಂ.ಕಾಂ, 2 ಎಂ.ಎ (ಹಿಂದಿ), 4 ಎಂ.ಎ (ಇತಿಹಾಸ), ೫ ಅರ್ಥಶಾಸ್ತ್ರ ಎಂ ಎ, ಮತ್ತು 6 ಎಂ.ಎಸ್ಸಿ (ರಸಾಯನ ಶಾಸ್ತ್ರ) ಯ ವಿದ್ಯಾರ್ಥಿಗಳಿದ್ದಾರೆ.