Home ಟಾಪ್ ಸುದ್ದಿಗಳು ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ವಿಶ್ವವ್ಯಾಪಿ ಖಂಡನೆ : ಧ್ವನಿಗೂಡಿಸಿದ ಓಝಿಲ್

ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ವಿಶ್ವವ್ಯಾಪಿ ಖಂಡನೆ : ಧ್ವನಿಗೂಡಿಸಿದ ಓಝಿಲ್

ಭಾರತದಲ್ಲಿ ಮುಸ್ಲಿಮರ ಮೇಲೆ ಹೆಚ್ಚುತ್ತಿರುವ ರಾಜ್ಯ ಸರ್ಕಾರಗಳ ಪ್ರಾಯೋಜಿತ ದೌರ್ಜನ್ಯಗಳು ದೇಶದಾಚೆಗೆ ಸುದ್ದಿಯಾಗುತ್ತಿದ್ದು, ಅಂತರಾಷ್ಟ್ರೀಯ ಸ್ಟಾರ್ ಫುಟ್ಬಾಲಿಗ ಮೇಝುಟ್ ಓಝಿಲ್, ಖ್ಯಾತ ಟಿವಿ ನಿರೂಪಕಿ ಮತ್ತು ಲೇಖಕಿಯಾಗಿರುವ ಪದ್ಮಾ ಲಕ್ಷ್ಮೀ ಹಾಗೂ ಅಮೆರಿಕದ ಪತ್ರಕರ್ತ ಮೆಹ್ದಿ ಹಸನ್ ಸೇರಿದಂತೆ ವಿವಿಧ ಕ್ಷೇತ್ರಗಳ ಖ್ಯಾತನಾಮರು ಭಾರತದಲ್ಲಿನ ಬೆಳವಣಿಗೆಗಳ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ.

“ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಮಾನವ ಹಕ್ಕುಗಳಿಗೇನಾಯಿತು?” ಎಂದು ಖ್ಯಾತ ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೇಝುಟ್ ಓಝಿಲ್, ತಮ್ಮ ಟ್ವಟರ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

“ರಮಝಾನ್ ತಿಂಗಳ ಪವಿತ್ರ ರಾತ್ರಿಯಂದು (ಲೈಲತುಲ್ ಖದ್ರ್) ನಾನು ಭಾರತದ ಮುಸ್ಲಿಂ ಸಹೋದರ, ಸಹೋದರಿಯರಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಇಂತಹಾ ನಾಚಿಗೇಡಿನ ಪರಿಸ್ಥಿತಿಯ ಕುರಿತು ನಾವು ಜಾಗೃತಿ ಮೂಡಿಸಬೇಕಾಗಿದೆ. ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ಹೇಳಿಕೊಳ್ಳುವಲ್ಲಿ ಮಾನವ ಹಕ್ಕುಗಳಿಗೇನಾಗಿದೆ? ಎಂದು ಅವರು ಪ್ರಶ್ನಿಸಿದ್ದಾರೆ. ಜೊತೆಗೆ break the silence ಎಂಬ ಹ್ಯಾಶ್ ಟ್ಯಾಗ್ ಅನ್ನೂ ಬಳಸಿದ್ದಾರೆ.

ಜರ್ಮನ್ ರಾಷ್ಟ್ರೀಯ ತಂಡದ ತಂಡದ ಮಿಡ್ ಫೀಲ್ಡರ್ ಮತ್ತು ಟರ್ಕಿಶ್ ಕ್ಲಬ್ ಫೆನೆರ್ಬೇಸ್ ತಂಡದ ನಾಯಕನಾಗಿರುವ ಮೇಝುಟ್ ಒಝಿಲ್, ಟ್ವಿಟರ್ ಖಾತೆಯಲ್ಲಿ  26 ಶತಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.

“ಪುಟಿನ್, ಓರ್ಬನ್, ಲೆ ಪೆನ್ ಸೇರಿದಂತೆ  ನಾವು ಪಾಶ್ಚಿಮಾತ್ಯ ದೇಶಗಳಲ್ಲಿ ಬಲಪಂಥೀಯ ನಿರಂಕುಶವಾದಿಗಳ ಉದಯದ ಬಗ್ಗೆ ಸಾಕಷ್ಟು ಮಾತನಾಡುತ್ತೇವೆ. ಆದರೆ ನಾವು ಭಾರತದ ನರೇಂದ್ರ ಮೋದಿ ಮತ್ತು ಅವರ ಬಿಜೆಪಿಯನ್ನು ಎಂದಿಗೂ ಉಲ್ಲೇಖಿಸುವುದಿಲ್ಲ.  ಮೋದಿ ಮತ್ತು ಮುಸ್ಲಿಂ ವಿರೋಧಿ ನರಮೇಧದ ಹೊಸ ಎಚ್ಚರಿಕೆಗಳ ಕುರಿತು ಆಳವಾದ ಅಧ್ಗಯನ ನಡೆಸಿದ್ದೇನೆ” ಎಂದು ಅಮೆರಿಕದ ಪತ್ರಕರ್ತ ಮೆಹ್ದಿ ಹಸನ್ ಟ್ವೀಟ್ ಮಾಡಿದ್ದಾರೆ.

ʻʻಭಾರತದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರವನ್ನು ನೋಡಿ ಒಂದು ವರ್ಗವು ಅಂಬ್ರಮಾಚರಿಸುತ್ತಿದೆ. ವ್ಯಾಪಕವಾದ ಮುಸ್ಲಿಂ ವಿರೋಧಿ ಭಾಷಣಗಳು ಭಯವನ್ನು ಸೃಷ್ಟೀಸುವುದರ ಜೊತೆಗೆ ಜನರ ಮನಸ್ಸನ್ನು ವಿಷಪೂರಿತಗೊಳಿಸುತ್ತದೆ. ಈ ಬೆಳವಣಿಗೆಯು ಅಪಾಯಕಾರಿ. ದುರ್ಬಲರು ಎಂದು ರಿಗಣಿಸಿದಾಗ ಅವರ ಮೇಲೆ ದಬ್ಬಾಳಿಕೆ ನಡೆಸುವುದು ಸುಲಭ” ಎಂದು ಖ್ಯಾತ ಟಿವಿ ನಿರೂಪಕಿ  ಪದ್ಮಾ ಲಕ್ಷ್ಮೀ ಟ್ವಿಟ್ಟರ್ನಲ್ಲಿ ಆರೋಪಿಸಿದ್ದಾರೆ.

ಹಿಂದೂ ಬಾಂಧವರೇ, ಭಯ ಹುಟ್ಟಿಸುವ ಕಾರ್ಯಕ್ಕೆ ಮಣಿಯಬೇಡಿ. ಭಾರತ ಸೇರಿದಂತೆ ಯಾವುದೇ ದೇಶದಲ್ಲ ಹಿಂದೂ ಧರ್ಮಕ್ಕೆ ಯಾವುದೇ ಅಪಾಯವಿಲ್ಲ. ನಿಜವಾದ ಆಧ್ಯಾತ್ಮಿಕತೆಯು ಯಾವುದೇ ರೀತಿಯ ದ್ವೇಷವನ್ನು ಬಿತ್ತಲು ಪ್ರಚೋದಿಸುವುದಿಲ್ಲ. ವಿಶಾಲವಾದ ಪ್ರಾಚೀನ ಭೂಮಿಯಲ್ಲಿ ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಒಗ್ಗಟ್ಟಾಗಿ ನೆಲೆಸಬೇಕು ಎಂದು ಪದ್ಮಾ ಲಕ್ಷ್ಮೀ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version