ದೇಶದಲ್ಲಿ ಏಕತೆ, ಅಭಿವೃದ್ಧಿ ಕಾಂಗ್ರೆಸ್‌’ನಿಂದ ಮಾತ್ರ ಸಾಧ್ಯ: ಇನಾಯತ್ ಅಲಿ

Prasthutha|

►ಮುಲ್ಕಿಯಲ್ಲಿ ಪ್ರಿಯಾಂಕ ಗಾಂಧಿಯಿಂದ ಬೃಹತ್ ಚುನಾವಣಾ ಪ್ರಚಾರ ಸಭೆ

- Advertisement -

ಮುಲ್ಕಿ: ದೇಶದಲ್ಲಿ ಏಕತೆ, ಅಭಿವೃದ್ಧಿ ಕಾಂಗ್ರೆಸ್‌’ನಿಂದ ಮಾತ್ರ ಸಾಧ್ಯ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಇನಾಯತ್ ಅಲಿ ಹೇಳಿದ್ದಾರೆ.

ಕೊಳ್ನಾಡು ಮುಲ್ಕಿಯಲ್ಲಿ ನಡೆದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಅಂದು ಮಹಾತ್ಮ ಗಾಂಧೀಜಿ, ನೆಹರೂ ಅವರಂತಹ ಮಹಾನ್ ನಾಯಕರು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಇಂದು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ಭಾರತದ ಏಕತೆಗಾಗಿ ಒಗ್ಗಟ್ಟಿಗಾಗಿ ಹೋರಾಟ ಮಾಡಿದರು. ನಮ್ಮ ನಾಯಕಿ ಪ್ರಿಯಾಂಕ ಗಾಂಧಿ ಅವರು ಕೂಡಾ ದೇಶದಾದ್ಯಂತ ಸಂಚರಿಸಿ ನವ ಭಾರತ ಕಟ್ಟುವ ಈ ಹೋರಾಟಕ್ಕೆ ಶಕ್ತಿ ತುಂಬುತ್ತಿದ್ದಾರೆ ಎಂದರು.

- Advertisement -

ಕರ್ನಾಟಕ ವಿಧಾನಸಭಾ ಚುನಾವಣೆ ದೇಶದ ಇತಿಹಾಸದಲ್ಲಿ ಪ್ರಮುಖ ಮೈಲುಗಲ್ಲಾಗಲಿದೆ. ಜಾತಿ ಧರ್ಮದ ಆಧಾರದಲ್ಲಿ ನಾಡಿನ ಸಹೋದರತೆಯನ್ನು ಏಕತೆಯನ್ನು ಒಡೆಯುವ ಆಡಳಿತ ಬಿಜೆಪಿಯದ್ದು. ಕಾಂಗ್ರೆಸ್ ಪಕ್ಷದ ಐಕ್ಯತೆಯ ಹಾಗೂ ಅಭಿವೃದ್ಧಿಯ ಆಡಳಿತ ನೀಡಲಿದೆ. ಪ್ರಿಯಾಂಕ ಗಾಂಧಿ ಅವರೊಂದಿಗೆ ನಾನು ಹೇಳ ಬಯಸುತ್ತೇನೆ ಖಂಡಿತವಾಗಿಯೂ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತಾರೆ ಹಾಗೂ ಈ ಹೋರಾಟಕ್ಕೆ ಜಯ ನೀಡಲಿದ್ದಾರೆ ಎಂದು ಹೇಳಿದ್ದಾರೆ.



Join Whatsapp