ವಾಜಪೇಯಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದ ಯಶವಂತ ಸಿನ್ಹಾ TMCಗೆ ಸೇರ್ಪಡೆ
Prasthutha: March 13, 2021

ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ಮಾಜಿ ಹಿರಿಯ ನಾಯಕರಾಗಿರುವ ಯಶವಂತ್ ಸಿನ್ಹಾ ಪಶ್ಚಿಮ ಬಂಗಾಳದ ಚುನಾವಣೆಯ ಹೊಸ್ತಿಲಲ್ಲೇ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷಕ್ಕೆ ಸೇರಿದ್ದಾರೆ. ಯಶವಂತ್ ಸಿನ್ಹಾ ಅವರು ವಾಜಪೇಯಿ ಸಂಪುಟದಲ್ಲಿ ಕೇಂದ್ರ ಹಣಕಾಸು ಸಚಿವರಾಗಿದ್ದರು.
ಯಶವಂತ್ ಸಿನ್ಹಾರವರು, ಡೆರೆಕ್ ಓ ಬ್ರಾಯನ್, ಸುದೀಪ್ ಬಂದೋಪಾಧ್ಯಾಯ ಹಾಗೂ ಸುಬ್ರತ್ ಮುಖರ್ಜಿ ಸಮ್ಮುಖದಲ್ಲಿ ಟಿಎಂಸಿಗೆ ಸೇರ್ಪಡೆಗೊಂಡಿದ್ದಾರೆ. ಆ ಮೂಲಕ ಬಂಗಾಳದ ಚುನಾವಣೆಗೆ ಹೊಸ ರಂಗು ಬಂದಂತಾಗಿದೆ.
