Home ಟಾಪ್ ಸುದ್ದಿಗಳು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇಂದ್ರ ಬಿಜೆಪಿ ಸಚಿವ ಕೋರ್ಟ್ ಗೆ ಶರಣಾಗತಿ!

ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇಂದ್ರ ಬಿಜೆಪಿ ಸಚಿವ ಕೋರ್ಟ್ ಗೆ ಶರಣಾಗತಿ!

ಕೊಲ್ಕತ: 2009ರಲ್ಲಿ ಎರಡು ಆಭರಣ ಅಂಗಡಿಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಸಿತ್ ಪ್ರಾಮಾಣಿಕ್ ಪಶ್ಚಿಮ ಬಂಗಾಳದ ಅಲಿಪುರ್ದುವಾರ್ ಜಿಲ್ಲೆಯ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಈ ಸಂಬಂಧ ಕಳೆದ ವರ್ಷ ನವೆಂಬರ್ ನಲ್ಲಿ ಅಲಿಪುರ್ದುವಾರ್ ಜಿಲ್ಲಾ ಮೂರನೇ ನ್ಯಾಯಾಲಯವು ಕೂಚ್ ಬೆಹಾರ್ನ ಬಿಜೆಪಿ ಸಂಸದ ಪ್ರಾಮಾಣಿಕ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು. ನಂತರ ಪ್ರಾಮಾಣಿಕ್ ಜಾಮೀನು ಅರ್ಜಿಯೊಂದಿಗೆ ಕಲ್ಕತ್ತಾ ಹೈಕೋರ್ಟ್ ಅನ್ನು ಸಂಪರ್ಕಿಸಿದರು.

ಈ ವಿಷಯವನ್ನು ವಿವರವಾಗಿ ಆಲಿಸಿದ ಕಲ್ಕತ್ತಾ ಹೈಕೋರ್ಟ್, ಜನವರಿ 12ರೊಳಗೆ ಅಲಿಪುರ್ದೂರ್ ಜಿಲ್ಲೆಯ ಮೂರನೇ ನ್ಯಾಯಾಲಯಕ್ಕೆ ಭೌತಿಕವಾಗಿ ಹಾಜರಾಗುವಂತೆ ಕೇಂದ್ರ ಸಚಿವರಿಗೆ ಸೂಚಿಸಿತ್ತು. ಹೈಕೋರ್ಟ್ ಆದೇಶದಂತೆ ಪ್ರಾಮಾಣಿಕ್ ಅವರು ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಕಲ್ಕತ್ತಾ ಹೈಕೋರ್ಟ್ ಆದೇಶದ ಪ್ರಕಾರ ಈ ಪ್ರಕರಣದ ಮುಂದಿನ ವಿಚಾರಣೆಗೆ ಅವರು ನ್ಯಾಯಾಲಯದಲ್ಲಿ ದೈಹಿಕವಾಗಿ ಹಾಜರಾಗಬೇಕಾಗಿಲ್ಲ ಮತ್ತು ಬದಲಿಗೆ ಅವರ ವಕೀಲರಿಂದ ಪ್ರತಿನಿಧಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

Join Whatsapp
Exit mobile version