ಮೋದಿ ಜನ್ಮ ದಿನಕ್ಕೆ ನೆಟ್ಟಿಗರಿಂದ ವಿಶೇಷ ಕೊಡುಗೆ | ನಾಳೆ ‘ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ’ಗೆ ಕರೆ

Prasthutha|

‘ಮೋದಿ ಜನ್ಮದಿನ’ದ ಪ್ರಯುಕ್ತ ದೇಶದ ಯುವ ಜನತೆ ಸೆಪ್ಟಂಬರ್ 17ರಂದು “ರಾಷ್ಟ್ರೀಯ ನಿರುದ್ಯೋಗ ದಿನಾಚರಣೆ” ಆಚರಿಸಲು ಭಾರೀ ಸಿದ್ಧತೆ ನಡೆಸುತ್ತಿರುವುದು ಕಂಡು ಬರುತ್ತಿದೆ.

ಟ್ವಿಟರ್, ಫೇಸ್ಬುಕ್ ಗಳಲ್ಲಿ “ನಿರುದ್ಯೋಗಿಗಳ ಸಂಕಷ್ಟ”ದ ಕುರಿತು ವಿಶೇಷ ಲೇಖನಗಳನ್ನು ಪ್ರಕಟಿಸಲು ಹಾಗೂ ರಾತ್ರಿ 12 ಗಂಟೆಯಿಂದ #National_Unemployment_Day ಹ್ಯಾಷ್‌ಟ್ಯಾಗ್ ನಲ್ಲಿ ಟ್ವಿಟರ್ ಅಭಿಯಾನ ನಡೆಸಲು ಕರೆ ನೀಡಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಪ್ರಚಾರ ಪಡೆದಿದೆ. #National_Unemployment_Day ಎಂಬ ಹ್ಯಾಷ್ ಟ್ಯಾಗ್ ಈಗಾಗಲೇ 60 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ನಾಳೆ ಇದು ದಾಖಲೆ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ.

- Advertisement -

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಗಂಭೀರವಾಗಿ ಕಾಡುತ್ತಿದ್ದು, ಈಗಾಗಲೇ ಯುವ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮೋದಿಯವರು ಯೂಟ್ಯೂಬ್ ನಲ್ಲಿ ನಡೆಸಿಕೊಡುವ ‘ಮನ್ ಕಿ ಬಾತ್’ ಮೊದಲಾದ ಕಾರ್ಯಕ್ರಮಗಳಿಗೆ ಭಾರೀ ಡಿಸ್ ಲೈಕ್ ಗಳು ಪಡೆಯುತ್ತಿರುವುದು ಇಲ್ಲಿ ಗಮನಾರ್ಹವಾಗಿದೆ.

- Advertisement -