ಹೊಸದಿಲ್ಲಿ: ಅವಿದ್ಯಾವಂತರು ದೇಶಕ್ಕೆ ಹೊರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅನಕ್ಷರಸ್ಥರು ಭಾರತದ ಉತ್ತಮ ಪ್ರಜೆಗಳಾಗಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ 20 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಮಿತ್ ಶಾ ಸಂಸದ್ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಿದ್ದರು. ‘ಅವಿದ್ಯಾವಂತರು ದೇಶಕ್ಕೆ ಹೊರೆಯಾಗಿರುತ್ತಾರೆ. ಅವರಿಗೆ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ತಿಳುವಳಿಕೆ ಇಲ್ಲ. ಅಂತಹವರನ್ನು ಹೇಗೆ ಉತ್ತಮ ನಾಗರಿಕರೆಂದು ಕರೆಯಬಹುದು?’ ಎಂದು ಅಮಿತ್ ಶಾ ಕೇಳಿದ್ದಾರೆ.