ಬೆಳಗಾವಿ: ಉದ್ಯಮಿ ಆರ್.ಎನ್. ನಾಯಕ್ ಹತ್ಯೆ ಪ್ರಕರಣದ ಆರೋಪಿ, ಭೂಗತ ಪಾತಕಿ ಬನ್ನಂಜೆ ರಾಜಾ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ಪಕಟವಾಗಿದೆ. ಬೆಳಗಾವಿಯ ಕೋಕಾ ನ್ಯಾಯಾಲಯ ಜೀವಾವಧಿ ಶಿಕ್ಷೆಯ ಇಂದು ತೀರ್ಪು ನೀಡಿದೆ.
ಉದ್ಯಮಿ ಆರ್.ಎನ್. ನಾಯಕ್ ರನ್ನು 2013ರ ಡಿಸೆಂಬರ್ 21 ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲಾದಲ್ಲಿ ಹತ್ಯೆಗೈಯ್ಯಲಾಗಿತ್ತು. ಹಫ್ತಾ ನೀಡದ ವಿಚಾರಕ್ಕೆ ಸಂಬಂಧಿಸಿ ಎನ್. ನಾಯಕ್ ಹತ್ಯೆ ಮಾಡಲಾಗಿತ್ತು.
ಕೊಲೆ ಪ್ರಕರಣದ A-2 ಆರೋಪಿ ಉತ್ತರ ಪ್ರದೇಶ ಮೂಲದ ಜಗದೀಶ್ ಪಟೇಲ್,A-3 ಆರೋಪಿ ಬೆಂಗಳೂರಿನ ಅಭಿ ಬಂಡಗಾರ್, A-4 ಆರೋಪಿ ಉಡುಪಿಯ ಗಣೇಶ್ ಭಜಂತ್ರಿ ಮತ್ತು A-9 ಆರೋಪಿ ಉಡುಪಿಯ ಬನ್ನಂಜೆ ರಾಜಾಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.