ಅನುಮತಿ ಪಡೆದು ಪ್ರತಿಭಟನೆ ನಡೆಸಿದ ನಮ್ಮ ಕಾರ್ಯಕರ್ತರ ಮೇಲೆ ಯಾರ ಒತ್ತಡದಿಂದ ಪ್ರಕರಣ ದಾಖಲು ಮಾಡಿದ್ದೀರಿ?: SDPI ಆಕ್ರೋಶ

- Advertisement -

ನ್ಯಾಯಕ್ಕಾಗಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಸಂತ್ರಸ್ತೆಯ ಕುಟುಂಬವನ್ನು ಭಯಪಡಿಸುವ ತಂತ್ರವೆ: ಅನ್ವರ್ ಸಾದತ್ ಬಜತ್ತೂರು

- Advertisement -

ಮಂಗಳೂರು: ಪುತ್ತೂರು ನಗರಸಭೆ ಸದಸ್ಯ ಪಿಜಿ ಜಗನ್ನಿವಾಸ್ ರಾವ್ ರವರ ಪುತ್ರ ಕೃಷ್ಣ ಜೆ ರಾವ್ ಎಂಬಾತ ತನ್ನ ಸಹಪಾಠಿ ವಿಧ್ಯಾರ್ಥಿನಿಯನ್ನು ಲೈಂಗಿಕವಾಗಿ ದುರುಪಯೋಗ ಪಡಿಸಿ ಗರ್ಭಧಾರಣೆ ನಡೆಸಿ ಮದುವೆಯಾಗಲು ನಿರಾಕರಿಸಿ ವಂಚಿಸಿದ ಕೃತ್ಯವನ್ನು ಖಂಡಿಸಿ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ನಿನ್ನೆ ನಗರಸಭೆ ಮುಂಭಾಗ ಪುತ್ತೂರು ಪೋಲಿಸ್ ಠಾಣೆಯಿಂದ ಹಾಗೂ ಪುತ್ತೂರು ತಹಶೀಲ್ದಾರ್ ಬಳಿಯಿಂದ ಸೂಕ್ತ ಅನುಮತಿ ಪಡೆದು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ ನಮ್ಮ ಕಾರ್ಯಕರ್ತರ ಮೇಲೆ ಪೋಲಿಸರು ಯಾರ ಒತ್ತಡದ ಮೇರೆಗೆ ಸುಳ್ಳು ಪ್ರಕರಣ ದಾಖಲಿಸಿದ್ದು ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇದು ಪುತ್ತೂರು ಬಿಜೆಪಿ ಮತ್ತು ಶಾಸಕರ ಮೇಲಿನ ಅತ್ಯಾಚಾರ ಸಂತ್ರಸ್ತೆಯ ತಾಯಿಯ ಆರೋಪದ ಮುಜುಗರದಿಂದ ಈ ಕ್ರಮ ಕೈಗೊಂಡಿರುವುದು ಹಾಗೂ ಈ ವಿಷಯವಾಗಿ ನ್ಯಾಯಕ್ಕಾಗಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಸಂತ್ರಸ್ತೆಯ ಕುಟುಂಬವನ್ನು ಭಯಪಡಿಸುವ ತಂತ್ರವಾಗಿದೆ ಎಂದಿದ್ದಾರೆ.

- Advertisement -

ಈ ಮೂಲಕ ಪೋಲಿಸ್ ಇಲಾಖೆ ಜನಪರ ಹೋರಾಟಗಾರಿಗೆ ಪ್ರತಿಭಟನೆ ಮಾಡುವ ಹಕ್ಕನ್ನು ನಿರಾಕರಣೆ ಮಾಡುತ್ತಿದೆ,ಇದು ಎಲ್ಲಿಯ ಕಾನೂನು? ಸೂಕ್ತ ಅನುಮತಿ ಪಡೆದು ಶಾಂತಿಯುತವಾಗಿ ಹಾಗೂ ಸಾಂಕೇತಿಕವಾಗಿ ನಡೆಸಿದ ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲು ಮಾಡಿದ್ದು ಯಾರ ಒತ್ತಡದಿಂದ ಎಂದು ಪೋಲಿಸ್ ಇಲಾಖೆ ಸ್ಪಷ್ಟ ಪಡಿಸಬೇಕು ಎಂದರು.

ಇಂತಹ ಸುಳ್ಳು ಕೇಸುಗಳಿಂದ ನಮ್ಮನ್ನು ಭಯಪಡಿಸಲು, ನ್ಯಾಯಪರವಾದ ಹೋರಾಟದಿಂದ ಹಿಂದೆ ಸರಿಸಲು ಸಾಧ್ಯವಿಲ್ಲ ಆ ಹೆಣ್ಣುಮಗುವಿಗೆ ನ್ಯಾಯ ದೊರಕುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದರು.

ಬಿಜೆಪಿ ಮುಖಂಡನ ಪುತ್ರನಿಂದ ತನ್ನ ಸಹಪಾಠಿ ವಿದ್ಯಾರ್ಥಿನಿಯ ಮೇಲೆ ಅನ್ಯಾಯವಾಗಿದೆ ಎಂದು ಎಫ್ಐಆರ್ ದಾಖಲಿಸಲು ಠಾಣೆಯ ಮೆಟ್ಟಿಲೇರಿದ ಸಂತ್ರಸ್ತೆಯ ತಾಯಿಯ ದೂರು ಆಲಿಸಿ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸುವ ಬದಲು, ನ್ಯಾಯವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಾಗುತ್ತದೆ. ಈ ಸುಳ್ಳು ಪ್ರಕರಣದ ಬಗ್ಗೆ ಕಾನೂನಾತ್ಮಕ ಹೋರಾಟ ಕೈಗೊಳ್ಳುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -


Must Read

Related Articles