ನಮ್ಮ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ 200 ರೂ. ಇಳಿಸಿದೆ: ಡಿಕೆ ಶಿವಕುಮರ್

Prasthutha|

ಬೆಂಗಳೂರು: ನಮ್ಮ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ 200 ರೂ. ಇಳಿಸಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮರ್ ಹೇಳಿದ್ದಾರೆ.

- Advertisement -


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಈ ದೇಶದ ಹೆಣ್ಣು ಮಕ್ಕಳು ಕರ್ನಾಟಕದ ಮಾದರಿ ನೋಡ್ತಿದ್ದಾರೆ. 500ರೂ. ಗೆ ಗ್ಯಾಸ್ ಸಿಲಿಂಡರ್ ಕೊಡಬೇಕು ಅಂತ ಹೇಳಿದ್ದೆವು. ಈಗ ನಾವು 2 ಸಾವಿರ ಕೊಡ್ತಿದ್ದೀವಿ ಎಂದರು.


ಹೆಣ್ಣು ಮಕ್ಕಳ ಅಕೌಂಟಿಗೆ ಹಣ ಹೋಗಲಿದೆ. ನೂರು ದಿನದ ಸಂಭ್ರಮ ಆಚರಿಸುತ್ತಿದ್ದೇವೆ. ನಾಡಿನ ಯಾವ ಮತದಾರ ಆಚರಣೆ ಮಾಡುತ್ತಿದ್ದಾರೆ. ನಾಡಿನ ಎಲ್ಲಾ ಹೆಣ್ಣು ಮಕ್ಕಳ ಮನೆಗೆ ಹಣ ತಲುಪುತ್ತಿದೆ. ಸಿದ್ದರಾಮಯ್ಯ, ನಾನು ಚೆಕ್ಗೆ ಸಹಿ ಹಾಕಿದ್ದೇವೆ ಎಂದು ಹೇಳಿದ್ದಾರೆ.