Home ಟಾಪ್ ಸುದ್ದಿಗಳು ಅಫ್ಘಾನ್ ನಿರಾಶ್ರಿತರು ಒಳಬರಲು ನೆರೆದೇಶಗಳ ಗಡಿಗಳನ್ನು ತೆರೆದಿಡುವಂತೆ ವಿಶ್ವಸಂಸ್ಥೆಯ ಆಗ್ರಹ

ಅಫ್ಘಾನ್ ನಿರಾಶ್ರಿತರು ಒಳಬರಲು ನೆರೆದೇಶಗಳ ಗಡಿಗಳನ್ನು ತೆರೆದಿಡುವಂತೆ ವಿಶ್ವಸಂಸ್ಥೆಯ ಆಗ್ರಹ

ವಿಶ್ವಸಂಸ್ಥೆ : ಅಫ್ಘಾನ್ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅಲ್ಲಿನ ನಾಗರಿಕರಲ್ಲಿ ಹೆಚ್ಚಿನವರು ಕ್ರಮಬದ್ಧ ವ್ಯವಸ್ಥೆಯ ಮೂಲಕ ದೇಶದಿಂದ ಹೊರಹೋಗಲು ಅಸಮರ್ಥರಾಗಿದ್ದಾರೆ. ಹಂತಹಂತವಾಗಿ ಹೆಚ್ಚುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಪಾಯದಲ್ಲಿರುವವರಿಗೆ ನೆರವಾಗಲು ಅಫ್ಘಾನ್ ನೆರೆ ದೇಶಗಳು ತಮ್ಮ ಗಡಿಭಾಗಗಳನ್ನು ತೆರೆದಿಡಬೇಕು ಎಂದು ವಿಶ್ವಸಂಸ್ಥೆಯ UNHCR ವಕ್ತಾರೆ ಶಬಿಯಾ ಮಂಟೂ ಆಗ್ರಹಿಸಿದ್ದಾರೆ.

ಅಮೆರಿಕವು ಅಫ್ಘಾನ್ನಿಂದ 3 ಸಾವಿರಕ್ಕೂ ಹೆಚ್ಚು ಜನರನ್ನು ಅಫ್ಘಾನ್ನಿಂದ ತೆರವುಗೊಳಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ ಈ ಉಪಕ್ರಮ ತುರ್ತು ಮತ್ತು ವ್ಯಾಪಕ ಅಂತರಾಷ್ಟ್ರೀಯ ಮಾನವೀಯ ನೆರವಿನ ಕ್ರಮಗಳಿಗೆ ಪರ್ಯಾಯವಾಗದು ಎಂದು ಯುನೈಟೆಡ್ ನೇಷನ್ಸ್ ಹೈಕಮಿಷನರ್ ಫಾರ್ ರೆಫ್ಯೂಜೀಸ್ (UNHCR) ವಕ್ತಾರೆ ಶಬಿಯಾ ಹೇಳಿದ್ದಾರೆ.

ಈ ಮಧ್ಯೆ, ಅಫ್ಘಾನ್ ನಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳ ಜತೆಗೆ ಕೆಲಸ ಮಾಡಿದ್ದವರನ್ನು ಹುಡುಕಲು ತಾಲಿಬಾನ್ ಗಳು ಮನೆಗೆ ನುಗ್ಗಿ ಶೋಧ ನಡೆಸುತ್ತಿರುವುದು, ಪ್ರತೀಕಾರದ ಭೀತಿಯನ್ನು ಹೆಚ್ಚಿಸಿದೆ ಎಂದು ವಿಶ್ವಸಂಸ್ಥೆ ಈ ಸಂಧರ್ಭದಲ್ಲಿ ತಿಳಿಸಿದೆ.

Join Whatsapp
Exit mobile version