ಅಫ್ಘಾನ್ ನಲ್ಲಿ ಭೀಕರ ಆಹಾರ ಬಿಕ್ಕಟ್ಟು: ವಿಶ್ವಸಂಸ್ಥೆ ಕಳವಳ

Prasthutha|

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಮುಂದಿನ ಒಂದು ತಿಂಗಳಲ್ಲಿ ತೀವ್ರ ರೀತಿಯ ಆಹಾರ ಬಿಕ್ಕಟ್ಟು ಉಂಟಾಗಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ತಾಲಿಬಾನ್ ಸರ್ಕಾರ ರಚನೆಯ ಪ್ರಯತ್ನದಲ್ಲಿರುವಾಗ ಮೂವರಲ್ಲಿ ಒಬ್ಬರು ಹಸಿವಿನಿಂದ ಬಳಲುವ ಸಾಧ್ಯತೆಯಿದೆ ಎಂಬ ಕಳವಳಕಾರಿ ಅಂಶವನ್ನು ಬಹಿರಂಗಪಡಿಸಿದೆ.

ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿ ಮುಂದುವರಿದಿದೆ ಎಂದು ಅಫ್ಘಾನಿಸ್ತಾನದ ವಿಶ್ವಸಂಸ್ಥೆಯ ಸಂಯೋಜಕರಾದ ರಮೀಝ್ ಅಲಕ್ಬರೋವ್ ಬುಧವಾರ ಹೇಳಿದರು. ದೇಶದ ಅರ್ಧಕ್ಕಿಂತ ಹೆಚ್ಚಿನ ಮಕ್ಕಳು ಈಗಾಗಲೇ ತಮ್ಮ ಮುಂದಿನ ಊಟವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ.

- Advertisement -

ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ಆಹಾರ ಬೆಲೆಗಳು ಸುಮಾರು 50 ಶೇಕಡಾ ಮತ್ತು ಪೆಟ್ರೋಲ್ ಬೆಲೆ 75 ಶೇಕಡಾದಷ್ಟು ವೃದ್ದಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಂತಾರಾಷ್ಟ್ರೀಯ ನೆರವು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಗಳು ಕಾರ್ಯನಿರ್ವಹಣೆ ಮಾಡುತ್ತಿಲ್ಲ ಮತ್ತು ಖಾಸಗಿ ನೌಕರರು ತಮ್ಮ ವೇತನವನ್ನು ಪಡೆಯುತ್ತಿಲ್ಲ ಎಂದು ಅಲಕ್ಬರೋವ್ ಅವರು ತಿಳಿಸಿದರು.

- Advertisement -