Home ಟಾಪ್ ಸುದ್ದಿಗಳು ಮುಹಮ್ಮದ್ ಜುಬೇರ್ ಬಂಧನಕ್ಕೆ ವಿಶ್ವಸಂಸ್ಥೆ ಕಳವಳ: ಶೀಘ್ರ ಬಿಡುಗಡೆಗೆ ಆಗ್ರಹ

ಮುಹಮ್ಮದ್ ಜುಬೇರ್ ಬಂಧನಕ್ಕೆ ವಿಶ್ವಸಂಸ್ಥೆ ಕಳವಳ: ಶೀಘ್ರ ಬಿಡುಗಡೆಗೆ ಆಗ್ರಹ

ವಿಶ್ವಸಂಸ್ಥೆ: ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರ ಬಂಧನಕ್ಕೆ ವಿಶ್ವಸಂಸ್ಥೆ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದೆ.

 “ಪತ್ರಕರ್ತರು ಏನು ಬರೆಯುತ್ತಾರೆ, ಏನು ಟ್ವೀಟ್ ಮಾಡುತ್ತಾರೆ ಮತ್ತು ಏನು ಹೇಳುತ್ತಾರೆಂಬುದರ ಮೇಲೆ ಜೈಲಿಗೆ ಹಾಕಬಾರದು” ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಹೇಳಿದ್ದಾರೆ.

ಮುಹಮ್ಮದ್ ಝುಬೇರ್ ಅವರ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಅವರು, ’ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

  “ಪ್ರಪಂಚದಾದ್ಯಂತ ಯಾವುದೇ ಸ್ಥಳವಿರಲಿ, ಜನರು ತಮ್ಮನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡುವುದು ಬಹಳ ಮುಖ್ಯ, ಪತ್ರಕರ್ತರು ತಮ್ಮನ್ನು ಮುಕ್ತವಾಗಿ ಮತ್ತು ಯಾವುದೇ ಕಿರುಕುಳದ ಬೆದರಿಕೆಯಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು” ಎಂದು ಸ್ಟೀಫನ್ ತಿಳಿಸಿದ್ದಾರೆ.

Join Whatsapp
Exit mobile version