Home ಟಾಪ್ ಸುದ್ದಿಗಳು ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಮೃತ್ಯು: ಕ್ಷಮೆ ಕೋರಿದ ವಿಶ್ವಸಂಸ್ಥೆ

ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಮೃತ್ಯು: ಕ್ಷಮೆ ಕೋರಿದ ವಿಶ್ವಸಂಸ್ಥೆ

ಗಾಝಾ: ಗಾಝಾದ ರಫಾದಲ್ಲಿ ಇಸ್ರೇಲ್ ಬಾಂಬ್ ಗೆ ಬಲಿಯಾದ ಭಾರತ ಮೂಲದ ಅಧಿಕಾರಿಯ ಸಾವಿಗೆ ವಿಶ್ವಸಂಸ್ಥೆ ಕ್ಷಮೆ ಯಾಚಿಸಿದೆ.

ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್ ಅನಿಲ್ ಕಾಳೆ ಅವರು ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತೆ ಇಲಾಖೆಯಲ್ಲಿ ಕಳೆದ ಎರಡು ತಿಂಗಳಿನಿಂದ ಭದ್ರತಾ ಸಮನ್ವಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ಬೆಳಿಗ್ಗೆ ಇವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಘಟನೆಯಲ್ಲಿ ಅನಿಲ್ ಕಾಳೆ ಮೃತಪಟ್ಟು, ಜೋರ್ಡನ್ ಮೂಲದ ಮತ್ತೊಬ್ಬ ಮಹಿಳಾ ಅಧಿಕಾರಿ ಗಾಯೊಂಡಿದ್ದರು. ಯುದ್ಧ ಪೀಡಿಯ ರಫಾದಲ್ಲಿರುವ ಯೂರೋಪಿಯನ್ ಆಸ್ಪತ್ರೆಗೆ ಇವರು ಪ್ರಯಾಣಿಸುತ್ತಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.

‘ಭಾರತದ ನಾಗರಿಕರಿಗೆ ಹಾಗೂ ಸರ್ಕಾರಕ್ಕೆ ನಾವು ನಮ್ಮ ಕ್ಷಮೆ ಹಾಗೂ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಭಾರತದ ಕೊಡುಗೆಯನ್ನು ನಾವು ಪ್ರಶಂಸಿಸುತ್ತೇವೆ’ ಎಂದು ವಿಶ್ವಸಂಸ್ಥೆಯ ಉಪವಕ್ತಾರ ಫರ್ಹಾನ್ ಹಕ್ ಹಾಗೂ ಪ್ರಧಾನ ಕಾರ್ಯದರ್ಶಿ ಅಂಟನಿಯೊ ಗುಟೆರಸ್ ದೈನಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version