Home ಟಾಪ್ ಸುದ್ದಿಗಳು ಉಮೇಶ್ ಕತ್ತಿ ಸಮಾಧಿಗೆ ಗುಟ್ಕಾ ಪ್ಯಾಕೆಟ್ ಇಟ್ಟು ನಮನ

ಉಮೇಶ್ ಕತ್ತಿ ಸಮಾಧಿಗೆ ಗುಟ್ಕಾ ಪ್ಯಾಕೆಟ್ ಇಟ್ಟು ನಮನ

ಚಿಕ್ಕೋಡಿ: ಮಂಗಳವಾರ ಹೃದಯಾಘಾತದಿಂದ ನಿಧನರಾದ ಸಚಿವ ಉಮೇಶ್ ಕತ್ತಿ ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಇಂದು ಪೂರೈಸಿದರು.

ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಸಮಾಧಿಗೆ ತೆರಳಿ ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು.

ಸಮಾಧಿಯ ಮೇಲೆ ಅವರ ಇಷ್ಟದ ತಿಂಡಿ, ತಿನಿಸುಗಳನ್ನು ಇಡಲಾಯಿತು. ಜೊತೆಗೆ ಸಮಾಧಿ ಮೇಲೆ ಅವರಿಗೆ ಇಷ್ಟವಾದ ಗುಟ್ಕಾ ಪ್ಯಾಕೇಟ್ ಇಟ್ಟು ನಮನ ಸಲ್ಲಿಸಲಾಯಿತು.

ನಿನ್ನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಅವರ ಅಂತ್ಯಕ್ರಿಯೆ ನಡೆದಿತ್ತು.

Join Whatsapp
Exit mobile version