Home ಕರಾವಳಿ ಉಳ್ಳಾಲ | 405 ಯೂನಿಟ್ ರಕ್ತ ಪೂರೈಸಿ ದಾಖಲೆ ನಿರ್ಮಿಸಿದ ಬ್ಲಡ್ ಹೆಲ್ಪ್’ಲೈನ್ ಕಲ್ಲಾಪು

ಉಳ್ಳಾಲ | 405 ಯೂನಿಟ್ ರಕ್ತ ಪೂರೈಸಿ ದಾಖಲೆ ನಿರ್ಮಿಸಿದ ಬ್ಲಡ್ ಹೆಲ್ಪ್’ಲೈನ್ ಕಲ್ಲಾಪು

ಉಳ್ಳಾಲ: ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ಬ್ಲಡ್ ಹೆಲ್ಪ್’ಲೈನ್ ವತಿಯಿಂದ ನಡೆದ “ರಕ್ತದಾನ ಶಿಬಿರ 2023” ಶಿಬಿರದಲ್ಲಿ 405 ಯೂನಿಟ್ ರಕ್ತ ಪೂರೈಸಿ ದಾಖಲೆ ನಿರ್ಮಿಸಿದೆ.

ಸ್ಥಳೀಯ ನಾಗರಿಕರು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಸಹಕಾರದಿಂದ ಕಲ್ಲಾಪುವಿನ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆದ ರಕ್ತದಾನ ಶಿಬಿರದಲ್ಲಿ 405 ಯೂನಿಟ್ ರಕ್ತವನ್ನು ಪೂರೈಸುವ ಮೂಲಕ ದಾಖಲೆ ನಿರ್ಮಿಸಿದೆ.

ಯಾನೆಪೋಯ, ವೆನ್’ಲಾಕ್ ಮತ್ತು ಕೆಎಸ್ ಹೆಗ್ಡೆ ಆಸ್ಪತ್ರೆಗಳ ಜಂಟಿ ಸಹಯೋಗದಲ್ಲಿ ಬ್ಲಡ್ ಹೆಲ್ಪ್’ಲೈನ್ ಬೃಹತ್ ರಕ್ತದಾನ ಶಿಬಿರ ಆಯೋಜಿಸಿತ್ತು.

ಈ ಶಿಬಿರದಲ್ಲಿ ಊರಿನ ಎಲ್ಲ ನಾಗರಿಕರು ಜಾತಿ ಧರ್ಮದ ಎಲ್ಲೆಯನ್ನು ಮೀರಿ ರಕ್ತವನ್ನು ದಾನ ಮಾಡುವ ಮೂಲಕ ಮಾನವೀಯ ಸಂಬಂಧಕ್ಕೆ ಮಿಡಿದರು.

Join Whatsapp
Exit mobile version