Home ಟಾಪ್ ಸುದ್ದಿಗಳು ಉಳ್ಳಾಲ | ಗುಜರಿ ವ್ಯಾಪಾರಿಯ ಕೊಲೆಯತ್ನ ಪ್ರಕರಣ: ಆರೋಪಿ ವಶಕ್ಕೆ

ಉಳ್ಳಾಲ | ಗುಜರಿ ವ್ಯಾಪಾರಿಯ ಕೊಲೆಯತ್ನ ಪ್ರಕರಣ: ಆರೋಪಿ ವಶಕ್ಕೆ

ಉಳ್ಳಾಲ: ಗುಜರಿ ವ್ಯಾಪಾರಿಯೋರ್ವನನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಜಾವೇದ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಪಂಜಿಮೊಗರುವಿನಲ್ಲಿ 13 ವರ್ಷಗಳ ಹಿಂದೆ ನಡೆದ ತಾಯಿ ಹಾಗೂ ಮಗಳ ಜೋಡಿ ಕೊಲೆ ಪ್ರಕರಣದಲ್ಲಿ ಕೊಲೆಗೀಡಾದ ಮಹಿಳೆಯ ಪತಿ ಹಮೀದ್ ಪಿ.ಎಂ. ಇರಿತಕ್ಕೆ ಒಳಗಾದವರು.


ಹಮೀದ್ ಆಸ್ಪತ್ರೆಯಲ್ಲಿ ಚೇತರಿಸಿರುವುದಾಗಿ ಮಾಹಿತಿ ಲಭಿಸಿದೆ. ಇತ್ತ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದ ತಂಡ ಮತ್ತು ಉಳ್ಳಾಲ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿ ಜಾವೇದನ್ನು ವಶಕ್ಕೆ ಪಡೆದಿದ್ದಾರೆ.

ಪಂಜಿಮೊಗರಿನಲ್ಲಿ 2011ರ ಜೂ. 28ರಂದು ರಝಿಯಾ ಮತ್ತು ಆಕೆಯ ಪುಟ್ಟ ಮಗು ಫಾತಿಮಾ ಜುವಾ ಹತ್ಯೆ ನಡೆದಿತ್ತು. ಕರಾವಳಿಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಈ ಜೋಡಿಕೊಲೆ ಪ್ರಕರಣ ನಡೆದು 13 ವರ್ಷ ಕಳೆದರೂ ಆರೋಪಿಗಳು ಪತ್ತೆಯಾಗಿಲ್ಲ. ಸಿಐಡಿ ತನಿಖೆ ನಡೆದರೂ ಹಂತಕರು ಸಿಕ್ಕಿಲ್ಲ.

Join Whatsapp
Exit mobile version