ಉಳ್ಳಾಲ: ಭಾನುವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಯುವಕ ಹಾಗೂ ಸಹಸವಾರ ಮಹಿಳೆ ಮೃತಪಟ್ಟಿರುವ ಘಟನೆ ನಾಟೆಕಲ್ ಸಮೀಪ ನಡೆದಿದೆ.
ಹಳೆಯಂಗಡಿ ತೋಕೂರು ಬಸ್ ನಿಲ್ದಾಣ ಬಳಿಯ ನಿವಾಸಿ ನಿಧಿ (29) ಹಾಗೂ ಬೈಕ್ ಸವಾರ ಯತೀಶ್ ದೇವಾಡಿಗ ಮೃತರು.
ಇವರಿಬ್ಬರು ಮುಡಿಪುವಿನಲ್ಲಿ ಸಂಬಂಧಿಕರೊಬ್ಬರ ಗೃಹಪ್ರವೇಶದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದರು. ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ನಿಧಿ ಭಾನುವಾರವೇ ಮೃತಪಟ್ಡಿದ್ದರು. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯತೀಶ್ ಸೋಮವಾರ ಕೊನೆಯುಸಿರೆಳೆದರು.