ಉಳ್ಳಾಲ: ಸಮುದ್ರ ವಿಹಾರಕ್ಕೆ ಬಂದಿದ್ದ ವ್ಯಕ್ತಿ ಕುಟುಂಬದವರ ಕಣ್ಣೆದುರಲ್ಲೇ ನೀರು ಪಾಲು

Prasthutha|

ಉಳ್ಳಾಲ: ವ್ಯಕ್ತಿಯೊಬ್ಬ ಕುಟುಂಬದವರ ಎದುರಲ್ಲೇ ನೀರು ಪಾಲಾದ ಘಟನೆ ಸೋಮೇಶ್ವರ ಬೀಚ್‌ ನಲ್ಲಿ ಭಾನುವಾರ ನಡೆದಿದೆ.

- Advertisement -


ಮೃತ ವ್ಯಕ್ತಿಯನ್ನು ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್(47) ಎಂದು ಗುರುತಿಸಲಾಗಿದೆ. ಮಂಗಳೂರಿನ ಎಸ್‌.ಡಿ.ಎಮ್ ಕಾಲೇಜಲ್ಲಿ ಬಸ್‌ ಚಾಲಕರಾಗಿದ್ದ ಪ್ರಶಾಂತ್‌ ಪ್ರತೀ ಆದಿತ್ಯವಾರವೂ ತೆರಳುವಂತೆ ಇಂದು ಕೂಡಾ ತಮ್ಮ ಪುತ್ರ ಚಿರಾಯು ಬೇಕಲ್‌, ಸಹೋದರ ವರದರಾಜ್ ಬೇಕಲ್, ಅವರ ಮಗ ವಂದನ್ ಬೇಕಲ್‌, ಮತ್ತು ಇತರರೊಂದಿಗೆ ಸೋಮೇಶ್ವರ ಬೀಚ್ ಗೆ ವಿಹಾರಕ್ಕೆ ತೆರಳಿದ್ದರು.


ದುರಾದೃಷ್ಟಾವಶಾತ್ ಪ್ರಶಾಂತ್ ಸಮುದ್ರದಲ್ಲಿ ಆಟವಾಡುತ್ತಿದ್ದಾಗ ನೀರುಪಾಲಾಗಿದ್ದಾರೆ. ಈಜು ಪರಿಣತನಾಗಿರುವ ಪ್ರಶಾಂತ್‌ ಅವರ ಪುತ್ರ ಚಿರಾಯು ತಕ್ಷಣ ಹಗ್ಗದಿಂದ ತಂದೆಯನ್ನು ನೀರಿನಿಂದ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದಾನೆ. ಆ ವೇಳೆಗಾಗಲೇ ಪ್ರಶಾಂತ್ ಸಾವನ್ನಪ್ಪಿದ್ದರು. ಪ್ರಶಾಂತ್ ಅವರ ಮಗ ಚಿರಾಯು ಇಂಜಿನಿಯರಿಂಗ್‌ ವ್ಯಾಸಂಗ ನಡೆಸುತ್ತಿದ್ದಾನೆ.

- Advertisement -


ಮೃತರು ತಾಯಿ, ಪತ್ನಿ, ಪುತ್ರ, ಇಬ್ಬರು ತಮ್ಮಂದಿರನ್ನು ಆಗಲಿದ್ದಾರೆ.

Join Whatsapp
Exit mobile version