Home ಟಾಪ್ ಸುದ್ದಿಗಳು ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ| ಪಾಕ್‌ ಹೆಸರನ್ನು ತೆಗೆದು ಹಾಕಿದ ಬ್ರಿಟನ್

ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ| ಪಾಕ್‌ ಹೆಸರನ್ನು ತೆಗೆದು ಹಾಕಿದ ಬ್ರಿಟನ್

ಲಂಡನ್: ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಿಂದ ಬ್ರಿಟನ್ ಸರಕಾರವು ಪಾಕಿಸ್ತಾನದ ಹೆಸರನ್ನು ಕೈಬಿಟ್ಟಿದೆ.

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ದೇಶಗಳ ಹೆಸರುಗಳಿರುವ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಲ್ಲಿ ಇರಾನ್‌, ಮ್ಯಾನ್ಮಾರ್ ಹಾಗೂ ಸಿರಿಯಾ ಸೇರಿ 26 ದೇಶಗಳ ಹೆಸರು ಇವೆ.  ಈಗ ಈ ಪಟ್ಟಿಯಿಂದ ಪಾಕಿಸ್ತಾನದ ಹೆಸರನ್ನು ಬ್ರಿಟನ್‌ ಸರ್ಕಾರ ಕೈಬಿಟ್ಟಿದೆ.

ಈ ವಿಷಯಕ್ಕೆ ಸಂಬಂಧಿಸಿದ ತಿದ್ದುಪಡಿ ಮಸೂದೆಯನ್ನು ಬ್ರಿಟನ್ ಸಂಸತ್‌ನಲ್ಲಿ ಸೋಮವಾರ ಮಂಡಿಸಲಾಗಿದೆ.  

‘ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ಹರಿಯುವುದನ್ನು ತಡೆಗಟ್ಟಲು ಪಾಕಿಸ್ತಾನ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಹೀಗಾಗಿ ಪಟ್ಟಿಯಿಂದ ಆ ದೇಶದ ಹೆಸರನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ’ ಎಂದು ಮಸೂದೆಯಲ್ಲಿ ಹೇಳಲಾಗಿದೆ.

Join Whatsapp
Exit mobile version