ಲಂಡನ್: ಸಚಿವ ಸಂಪುಟಕ್ಕೆ ಹಲವಾರು ಸಚಿವರು ಸಾಮೂಹಿಕ ರಾಜೀನಾಮೆ ನೀಡಿದ ಬೆನ್ನಲ್ಲೇ ಬ್ರಿಟನ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ.
ಅಲ್ಲದೆ ಬೋರಿಸ್ ಅವರು ಕನ್ಸರ್ವೇಟಿವ್ ಸಂಸದೀಯ ಪಕ್ಷದ ನಾಯಕನ ಸ್ಥಾನಕ್ಕೂ ಇಂದು ರಾಜೀನಾಮೆ ನೀಡಿದ್ದಾರೆ.
ಬದಲಿ ನಾಯಕನ ಆಯ್ಕೆ ಆಗುವವರೆಗೆ ಇನ್ನೂ ಕೆಲವು ತಿಂಗಳು ಅಧಿಕಾರದಲ್ಲಿ ಇರಲು ಬೋರಿಸ್ ಜಾನ್ಸನ್ ಬಯಸಿದ್ದಾರೆ ಎಂದು ಸನ್ ಸಂಪಾದಕ ಹ್ಯಾರಿ ಕೋಲ್ ತಿಳಿಸಿದ್ದಾರೆ.
ಅಕ್ಟೋಬರ್’ನಲ್ಲಿ ನಿಗದಿಯಾಗಿರುವ ಕನ್ಸರ್ವೇಟಿಕ್ ಪಕ್ಷದ ಸಮಾವೇಶದ ವೇಳೆ ನೂತನ ನಾಯಕನನ್ನು ಆಯ್ಕೆ ಮಾಡುವವರೆಗೂ ಬೋರಿಸ್ ಜಾನ್ಸನ್ ಅವರು ಆಡಳಿತದ ಉಸ್ತುವಾರಿಯನ್ನು ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.