Home ಟಾಪ್ ಸುದ್ದಿಗಳು UGC ಯ ಮಾರ್ಗಸೂಚಿಗಳು ಸಾಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿವೆ: SDPI

UGC ಯ ಮಾರ್ಗಸೂಚಿಗಳು ಸಾಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿವೆ: SDPI

ನವದೆಹಲಿ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಯುಜಿಸಿಯ ನೂತನ ಮಾರ್ಗಸೂಚಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ  SDPI, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಎಚ್ ಇಐ) ಎಸ್ಸಿ, ಎಸ್ಟಿ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಮೀಸಲಿಟ್ಟಿರುವ ಹುದ್ದೆಗಳನ್ನು ಮೀಸಲಾತಿ ಸಮುದಾಯದಿಂದ ಸೂಕ್ತ ಅಭ್ಯರ್ಥಿಗಳು ಲಭ್ಯವಿಲ್ಲದ ಸಂದರ್ಭದಲ್ಲಿ ಅಂತಹ ಹುದ್ದೆಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಂದ ಭರ್ತಿ ಮಾಡಲು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಕರಡು ಮಾರ್ಗಸೂಚಿ ಹೊರಡಿಸಿದೆ. ಇದು ಸಂವಿಧಾನದ ಮೀಸಲಾತಿ ನೀತಿಗೆ ವಿರುದ್ಧ ಎಂದಿರುವ ಎಸ್ಡಿಪಿಐ, ಇದು ಅವಕಾಶ ವಂಚಿತ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳ ನೈತಿಕತೆ ಮತ್ತು ಸಂವಿಧಾನವನ್ನು ಮೀರಿದ ಉದ್ದೇಶವನ್ನು ಹೊಂದಿರುವಂತೆ ತೋರುತ್ತಿದೆ ಎಂದಿದೆ.

ನೇರ ನೇಮಕಾತಿಯಲ್ಲಿ ಮೀಸಲಾತಿ ಅಡಿಯಲ್ಲಿ ಮೀಸಲಿರಿಸಿದ ಹುದ್ದೆಗಳನ್ನು ಮೀಸಲಾತಿಯಿಂದ ಬದಲಾಯಿಸಿ, ಸಾಮನ್ಯ ಮಾಡುವುದರ ನಿಷೇಧವಿದೆ. ಆದರೆ ಅಪರೂಪದ ಮತ್ತು ವಿಶೇಷ ಸಂದರ್ಭಗಳಲ್ಲಿ ಗ್ರೂಪ್ ಎ ಹುದ್ದೆಯನ್ನು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕೆ ಖಾಲಿ ಉಳಿಯಲು ಸಾಧ್ಯವಿಲ್ಲದಿದ್ದಾಗ, ಸಂಬಂಧಿಸಿದ ವಿಶ್ವವಿದ್ಯಾಲಯ ಮೀಸಲಾತಿಯನ್ನು ರದ್ದುಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಬಹುದು ಎಂದಿದೆ. ಇದು ಭಿನ್ನವಾಗಿ ವ್ಯಾಖ್ಯಾನಿಸಬಹುದಾದ ಪ್ರಸ್ತಾವನೆ ಅನರ್ಹತೆಯ ನೆಪದಲ್ಲಿ ಮೀಸಲಾತಿ ಅಭ್ಯರ್ಥಿಗಳಿಗೆ ಅವಕಾಸ ತಪ್ಪಿಸುವ ಕೆಟ್ಟ ಸಂಪ್ರದಾಯಕ್ಕೆ ಕಾರಣವಾಗುತ್ತದೆ ಮತ್ತು ಆ ಹುದ್ದೆಗಳಿಗೆ ಮೇಲ್ಜಾತಿ ಅಭ್ಯರ್ಥಿಗಳನ್ನು ತುಂಬಲು ದಾರಿ ಮಾಡಿಕೊಡುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲು ಹುದ್ದೆಗಳನ್ನು ತುಂಬಲು ಸಾಮಾನ್ಯ ವರ್ಗಕ್ಕೆ ವರ್ಗಾಯಿಸುವ ಬದಲು SC, ST ಮತ್ತು OBC ಅಭ್ಯರ್ಥಿಗಳನ್ನು ತುಂಬಲು UGC ಸ್ಪರ್ಧಾತ್ಮಕ ಮತ್ತು ನವೀನ ವಿಧಾನವನ್ನು ಅನ್ವೇಷಿಸಬೇಕು ಎಂದು ಹೇಳಿದೆ.

Join Whatsapp
Exit mobile version