Home ಕರಾವಳಿ ಉಡುಪಿ: ಗುಂಡಿಟ್ಟು‌ ಕೊಲೆ

ಉಡುಪಿ: ಗುಂಡಿಟ್ಟು‌ ಕೊಲೆ

ಉಡುಪಿ: ವ್ಯಕ್ತಿಯೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಟ್ಟು ಕೊಂದ ಘಟನೆ ಬ್ರಹ್ಮಾವರ ಸಮೀಪದ ಬಾರ್ಕೂರಿನಿ ಹನೆಹಳ್ಳಿಯಲ್ಲಿ ನಡೆದಿದೆ.

ಕೃಷ್ಣ (36) ಮೃತ ವ್ಯಕ್ತಿ. ಮಣಿಪಾಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ, ಶನಿವಾರ ರಾತ್ರಿ ಮನೆಯಲ್ಲಿ ಏಕಾಂಗಿಯಾಗಿ ಊಟ ಮಾಡುತ್ತಿದ್ದ ವೇಳೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ಪಿಸ್ತೂಲಿನಿಂದ ಗುಂಡಿಕ್ಕಿ ಪರಾರಿಯಾಗಿದ್ದಾರೆ.

ಕೃಷ್ಣ ಸ್ಥಳದಲ್ಲೇ ಪ್ರಾಣ ಕಳಕೊಂಡಿದ್ದಾರೆ. ಮುಂಜಾನೆ ಕೃತ್ಯ ಬೆಳಕಿಗೆ ಬಂದಿದೆ

ಸ್ಥಳೀಯರಿಗೆ ರಾತ್ರಿ ಫೈರಿಂಗ್ ಶಬ್ದ ಕೇಳಿದಾಗ ಪಟಾಕಿ ಶಬ್ದ ಇರಬಹುದೆಂದು ಎಂದು ಸುಮ್ಮನಾಗಿದ್ದರು ಎನ್ನಲಾಗಿದೆ. . ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ, ಬ್ರಹ್ಮಾವರ ಪೊಲೀಸರು ಭೇಟಿ ನೀಡಿದ್ದಾರೆ.

Join Whatsapp
Exit mobile version