ಉಡುಪಿ: 18 ತಿಂಗಳ ಹಿಂದೆ ದಫನ ಮಾಡಲಾಗಿದ್ದ, ಅಪರಿಚಿತ ವ್ಯಕ್ತಿಯ ಕಳೇಬರವನ್ನು ಪಂಜಾಬ್ ಪೊಲೀಸರು ಹೊರ ತೆಗೆಸಿರುವ ಘಟನೆ ಬೀಡಿನಗುಡ್ಡೆಯ ರುದ್ರಭೂಮಿಯಲ್ಲಿ ಶನಿವಾರ ನಡೆದಿದೆ.
ವಾರಸುದಾರರ ಬರುವಿಕೆಗಾಗಿ ಶವವನ್ನು ಪೊಲೀಸರು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದರು. ಆದರೆ ಯಾರೂ ಸಂಪರ್ಕಿಸದೇ ಇರುವುದರಿಂದ ಕಾನೂನಿನಂತೆ ದಫನ ಕಾರ್ಯ ನಡೆಸಿದ್ದರು.
ಬಳಿಕ ತುಂಬಾ ಸಮಯಗಳ ನಂತರ ಪಂಜಾಬ್ ಮೂಲದ ವ್ಯಕ್ತಿಯೆಂದು ತಿಳಿದು ಬಂದಿದೆ. ಪಂಜಾಬ್ ನಿಂದ ಉಡುಪಿಗೆ ಆಗಮಿಸಿದ ಪೊಲೀಸರು, ಅಸ್ಥಿಪಂಜರವನ್ನು ತಹಶೀಲ್ದಾರ್ ಹಾಗೂ ಮತ್ತಿರರ ಅಧಿಕಾರಿಗಳ ಸಮಕ್ಷಮದಲ್ಲಿ ಮೇಲಕ್ಕೆತ್ತಿದರು. ನಂತರ ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.