Home ಕರಾವಳಿ ಉಡುಪಿ: ಅತ್ಯಾಚಾರ ಖಂಡಿಸಿ ವಿಮೆನ್ಸ್ ಫ್ರಂಟ್ ನಿಂದ ಪ್ರತಿಭಟನೆ

ಉಡುಪಿ: ಅತ್ಯಾಚಾರ ಖಂಡಿಸಿ ವಿಮೆನ್ಸ್ ಫ್ರಂಟ್ ನಿಂದ ಪ್ರತಿಭಟನೆ

ಉಡುಪಿ: ದೇಶಾದ್ಯಂತ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಸದಸ್ಯರು ಗುರುವಾರ ಹೆಣ್ಣೇ, ಪ್ರತಿರೋಧದಿ ನಡೆ.. ಅತ್ಯಾಚಾರವ ತಡೆ ಎಂಬ ಘೋಷಣೆಯೊಂದಿಗೆ ಉಡುಪಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಬಳಿ ಪ್ರತಿಭಟನಾ ಸಭೆ ನಡೆಸಿದರು.


ಪ್ರತಿಭಟನಕಾರರನ್ನು ಉದ್ದೇಶಿಸಿ ಶಾಲಾ ಶಿಕ್ಷಕಿ ಪದ್ಮಲತಾ ಮಾತನಾಡಿ, ಮಹಿಳೆಯರು ತಮ್ಮ ವಿರುದ್ಧದ ದೌರ್ಜನ್ಯದ ವಿರುದ್ಧ ಪ್ರತಿರೋಧ ತೋರಬೇಕು. ಎಲ್ಲಾ ರೀತಿಯ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಬೇಕು ಎಂದು ಕರೆ ನೀಡಿದರು.
ಉಡುಪಿ ಜಿಲ್ಲಾ ಎನ್ ಡಬ್ಲ್ಯೂ ಎಫ್ ಅಧ್ಯಕ್ಷೆ ನಸೀಂ ಝುರೈ, ಮಹಿಳೆಯರು ಪ್ರಸ್ತುತ ಎದುರಿಸುವ ಸಮಸ್ಯೆಗಳು ಮತ್ತು ಸರಕಾರ ಅದಕ್ಕಾಗಿ ಕೈಗೊಳ್ಳಬೇಕಾದ ಪರಿಹಾರದ ಕುರಿತು ವಿವರಿಸಿದರು.

ನಾಝಿಯ ನಸ್ರುಲ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಜಿಲ್ಲಾಧಿಕಾರಿಯವರಿಗೆ ಉಡುಪಿ ತಹಶಿಲ್ದಾರರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.

Join Whatsapp
Exit mobile version