Home ಕರಾವಳಿ ಉಡುಪಿ ಭದ್ರತಾ ಸಿಬ್ಬಂದಿ‌ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ನಲ್ಲಿ ಎಸ್ಸೈ ಸಹಿತ ಮೂವರ ಹೆಸರು

ಉಡುಪಿ ಭದ್ರತಾ ಸಿಬ್ಬಂದಿ‌ ಆತ್ಮಹತ್ಯೆ ಪ್ರಕರಣ: ಡೆತ್ ನೋಟ್ ನಲ್ಲಿ ಎಸ್ಸೈ ಸಹಿತ ಮೂವರ ಹೆಸರು

ಉಡುಪಿ: ತನ್ನದೇ ರೈಫಲಿನ ಗುಂಡೇಟಿಗೆ ಬಲಿಯಾದ ಡಿ.ಆರ್ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಲಭ್ಯವಾಗಿದ್ದು, ಮೂವರು ಪೋಲಿಸರ ವಿರುದ್ದ ಆತ್ಮಹತ್ಯೆ ಪ್ರಚೋದನಾ ಪ್ರಕರಣ ದಾಖಲಾಗಿದೆ.

ಡಿಎಆರ್‌ ಎಪಿಸಿ ಉಮೇಶ, ಡಿಎಆರ್‌ ಎಪಿಸಿ ಅಶ್ಫಕ್‌, ಗಂಗೊಳ್ಳಿ ಠಾಣಾ ಪಿ.ಎಸ್.ಐ ನಂಜ ನಾಯ್ಕ್ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ದ ಸೆಕ್ಷನ್ 306 ರ ಅಡಿಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುವಾರ ರಾತ್ರಿ ನಗರದ ಆದಿ ಉಡುಪಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರ ಪತ್ರಿಕೆಯ ಕಾವಲಿಗೆ ಮೂವರು ಡಿ‌.ಆರ್ ಪೋಲಿಸರನ್ನು ನಿಯೋಜಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಕುರ್ಚಿಯಲ್ಲೇ ಕುಳಿತ ಸ್ಥಿತಿಯಲ್ಲಿ ರಾಜೇಶ್ ಮೃತ ದೇಹ ಪತ್ತೆಯಾಗಿತ್ತು.

Join Whatsapp
Exit mobile version