ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ಥವಾಗಿದೆ. ಹಲವೆಡೆ ನಿನ್ನೆ ಬಿಸಿದ ಬಿರಗಾಳಿಗೆ ಮನೆ, ಮರ ಸೇರಿದಂತೆ ತಂತಿಕಂಬಗಳು ಧರೆಗುರುಳಿವೆ. ತೌಕ್ತೆ ಚಂಡಮಾರುತ ಉಡುಪಿ ಜಿಲ್ಲೆಯಾದ್ಯಂತ ತನ್ನ ರುದ್ರ ನರ್ತನ ತೋರಿದ್ದು. ಒಂದೆಡೆ ಹೆಚ್ಚಿದ ಕಡಲಬ್ಬರ ಮತ್ತೊಂದಡೆ ಜೋರಾಗಿ ಬೀಸುವ ಬಿರುಗಾಳಿ. ಶನಿವಾರ ಬೀಸಿದ ಬಿರುಗಾಳಿಗೆ ಉಡುಪಿ ಜಿಲ್ಲೆಯ ಮೂಳೂರು, ಮಲ್ಪೆ , ಕಾಪು, ಕೋಡಿ ಮುಂತಾದ ಕಡೆಗಳಲ್ಲಿ ಬ್ರಹತ್ ಗಾತ್ರದ ಮರಗಳು ರಸ್ತೆಗೆ ಉರುಳಿದ್ದು ಇದರಿಂದಾಗಿ ವಿದ್ಯುತ್ ವ್ಯತ್ಯಯ ಹಾಗೂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುವ ಮೂಲಕ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರು, ಪಾಪ್ಯುಲರ್ ಫ್ರಂಟ್ ಉಡುಪಿ ರಕ್ಷಣಾ ತಂಡದ ಸದಸ್ಯರು ಕಾರ್ಯಪ್ರವೃತ್ತರಾಗಿ ಆ ಮರಗಳನ್ನು ತೆರವುಗೊಳಿಸಿದರು.
ಅದೇ ರೀತಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆಯಿಂದಾಗಿ ಮನೆಯೊಳಗೆ ನೀರು ಹರಿದು ಬಂದಿದ್ದು ಅಲ್ಲಿಯ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ತೆರವುಗೊಳಿಸಲು ಪಾಪ್ಯುಲರ್ ಫ್ರಂಟ್ ರೆಸ್ಕ್ಯೂ ತಂಡದ ಸದಸ್ಯರು ನೆರವಾದರು. ನಿನ್ನೆ ಸುರಿದ ಮಳೆಯಿಂದ ಉಡುಪಿಯ ಹೊಡೆ ಹಾಗೂ ಇತರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ಕಸ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳು ಜಮಾವಣೆಗೊಂಡು ಕೃತಕ ನೆರೆ ಸೃಷ್ಟಿಯಾಗುವ ಸಾಧ್ಯತೆಯಿತ್ತು ಈ ಸಂದರ್ಭದಲ್ಲಿ ಕಸಕಡ್ಡಿಗಳನ್ನು ಅಲ್ಲಿಂದ ತೆರವುಗೊಳಿಸುವ ಕಾರ್ಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ನೆರವೇರಿಸಿದರು.
ಜಿಲ್ಲೆಯ ಕಾಪು, ಬೆಳಪು, ಕನ್ನಂಗರ್ ಕೋಡಿ, ಮಲ್ಪೆ, ಹೊಡೆ ಮತ್ತು ಇತರ ಕೆಲವು ಕಡೆಗಳಲ್ಲಿ ಮಳೆಯಿಂದಾಗಿ ಉಂಟಾದ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹವಾಮಾನ ಇಲಾಖೆ ವರದಿಯಂತೆ ಮೇ 20ರ ವರೆಗೆ ಮಳೆ ಮುಂದುವರಿಯುವ ಸಂಭವವಿದ್ದು ಯಾವುದೇ ರೀತಿಯ ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸಲು ಪಾಪ್ಯುಲರ್ ಫ್ರಂಟ್ ರೆಸ್ಕ್ಯೂ ತಂಡದ ಸದಸ್ಯರು ಸನ್ನದ್ಧರಾಗಿದ್ದಾರೆ. ಸಾರ್ವಜನಿಕರು ತಮ್ಮ ಪ್ರದೇಶಗಳ ಪಾಪ್ಯುಲರ್ ಫ್ರಂಟ್ ಉಸ್ತುವಾರಿಗಳನ್ನು ಸಂಪರ್ಕಿಸಬಹುದು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ರಾಗಿರುವ ನಜೀರ್ ಅಹ್ಮದ್ ರವರು ಕೇಳಿಕೊಂಡಿದ್ದಾರೆ.